ಕರ್ನಾಟಕ

karnataka

ಬೆಳಗಾವಿಯಲ್ಲಿ ಮಳೆಗೆ ಮನೆ ಕುಸಿತ.. ತಾಯಿ ಮಗು ಬಲಿಯಾದ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ

By

Published : Oct 4, 2022, 12:09 PM IST

ಯರಗಟ್ಟಿ ತಾಲೂಕಿನ ಮಾಗಮಗೇರಿ ಗ್ರಾಮದಲ್ಲಿ ಕಳೆದ ಶನಿವಾರ ಉಂಟಾದ ಭೀಕರ ಮಳೆಗೆ ಮನೆ ಕುಸಿತ ಆಗಿ ತಾಯಿ ಮಗು ಮೃತಪಟ್ಟಿದ್ದರು. ಈ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಪೂರೈಸಲಾಗಿದೆ.

compensation to family of those who died after House collapsed in Belgaum
ಬೆಳಗಾವಿಯಲ್ಲಿ ಮಳೆಗೆ ಮನೆ ಕುಸಿತ

ಬೆಳಗಾವಿ: ಧಾರಾಕಾರ ಮಳೆ ಹಿನ್ನೆಲೆ ಮಾಡಮಗೇರಿ ಗ್ರಾಮದಲ್ಲಿ ಮನೆ ಕುಸಿತ ಆಗಿ ತಾಯಿ ಮಗು ಮೃತಪಟ್ಟಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ ಮಹಾಂತೇಶ ಮಠದ ಅವರು ಹತ್ತು ಲಕ್ಷ ರೂ. ಪರಿಹಾರ ವಿತರಿಸಿದರು.

ಕಳೆದ ಶನಿವಾರ ಉಂಟಾದ ಭೀಕರ ಮಳೆಗೆ ಯರಗಟ್ಟಿ ತಾಲೂಕಿನ ಮಾಗಮಗೇರಿ ಗ್ರಾಮದ ಮಹಾದೇವ ಎಂಬುವವರ ಮನೆ ಕುಸಿದು ಮಗ ಪ್ರಜ್ವಲ್ ಮಹಾದೇವ ಬಾಗಿಲದ (5) ಹಾಗೂ ಪತ್ನಿ ಯಲ್ಲವ್ವ ಮಹಾದೇವ ಬಾಗಿಲದ (40) ಸ್ಥಳದಲ್ಲೇ ಮೃತಪಟ್ಟಿದ್ದರು. ಇದೇ ಕುಟುಂಬದ ಉದ್ದವ್ವ ಹಾಗೂ ರೂಪಾ ಎಂಬುವವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ ತ್ವರಿತವಾಗಿ ಸ್ಪಂದಿಸಿದ ಯರಗಟ್ಟಿ ತಾಲೂಕಾಡಳಿತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಜೊತೆಗೆ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿತ್ತು. ಸದ್ಯ ಮೃತ ಕುಟುಂಬದ ಸಂಬಂಧಿಕರಿಗೆ ತಾಲೂಕು ಆಡಳಿತದ ವತಿಯಿಂದ ಯರಗಟ್ಟಿ ತಹಶಿಲ್ದಾರ್ ಮಹಾಂತೇಶ ಮಠದ ಹತ್ತು ಲಕ್ಷ ರೂ. ಪರಿಹಾರ ನೀಡಿದ್ದಾರೆ.

ಇದನ್ನೂ ಓದಿ:ಬಳ್ಳಾರಿ: ನೀರು ಕುಡಿಯಲು ಕಾಲುವೆಗೆ ಇಳಿದಾಗ ಜಾರಿ ಬಿದ್ದ ಯುವಕ ನಾಪತ್ತೆ

ಈ ವೇಳೆ ಯಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಕಲ್ಲೋಳ್ಳೆಪ್ಪ ಶಿದ್ದಣ್ಣವರ, ಗ್ರಾಮಲೆಕ್ಕಾಧಿಕಾರಿ ಶಿವು ಮಠಪತಿ, ಕಂದಾಯ ನಿರೀಕ್ಷಕ ವೈ.ಎಫ್. ಮುರ್ತೇಣ್ಣವರ, ಮಹೇಶ ಖಂಡ್ರಿ, ಅಣ್ಣಪ್ಪ ಹಾಲಗಿ, ಫಕ್ಕೀರಪ್ಪ ಖಂಡ್ರಿ, ಮಹಾದೇವ ಬಾಗಿಲದ ಉಪಸ್ಥಿತರಿದ್ದರು.

ABOUT THE AUTHOR

...view details