ಚಿಕ್ಕೋಡಿ:ಕರ್ತವ್ಯ ನಿರತರಾಗಿದ್ದ ಕಾಗವಾಡ ತಹಶೀಲ್ದಾರ್ ಕಾರು ಮತ್ತು ಪೊಲೀಸ್ ಕಾನ್ಸ್ಟೇಬಲ್ ಬೈಕ್ ಮುಖಾಮುಖಿ ಡಿಕ್ಕಿಯಾದ ಘಟನೆ ತಾಲೂಕಿನ ಮಾಂಜರಿ ಗ್ರಾಮದ ಬಳಿ ನಡೆದಿದೆ.
ಕಾರು-ಬೈಕ್ ಡಿಕ್ಕಿ: ಕರ್ತವ್ಯದಲ್ಲಿದ್ದ ಕೊರೊನಾ ವಾರಿಯರ್ಸ್‌ಗೆ ಗಾಯ - ಕರ್ತವ್ಯದಲ್ಲಿದ್ದ ಕೊರೊನಾ ವಾರಿಯರ್ಸ್‌ಗೆ ಗಾಯ
ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆಯವರ ಕಾರು ಹಾಗೂ ಐಗಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಿವನಗೌಡ ಪಾಟೀಲ್ ಅವರ ಬೈಕ್ ಮುಖಾಮುಖಿ ಡಿಕ್ಕಿಯಾದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ನಡೆದಿದೆ.
ಕಾರು ಹಾಗೂ ಬೈಕ್ ನಡುವೆ ಡಿಕ್ಕಿ
ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆಯವರಿಗೆ ಸೇರಿದ ಖಾಸಗಿ ಕಾರು ಹಾಗೂ ಐಗಳಿ ಠಾಣೆಯ ಕಾನ್ಸ್ಟೇಬಲ್ ಶಿವನಗೌಡ ಪಾಟೀಲ್ ಅವರ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಶಿವನಗೌಡ ಪಾಟೀಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರಿಗೆ ಕೂಡ ಸಣ್ಣಪುಟ್ಟ ಗಾಯಗಳಾಗಿವೆ.
ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.