ಬೆಳಗಾವಿ :ಖಾನಾಪೂರ ತಾಲೂಕಿನ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದೆ.
ತಾಲೂಕಿನ ಬೆಳವಟ್ಟಿ ಗ್ರಾಮದ ರೋಹಿತ್ ನಾರಾಯಣ ಚಾಂದಿಲಕರ್ (19) ಅಪಘಾತದಲ್ಲಿ ಮೃತನಾಗಿದ್ದಾನೆ. ಈತನೊಂದಿಗೆ ಬೈಕ್ನಲ್ಲಿದ್ದ ಅದೇ ಗ್ರಾಮದ ಗಣೇಶ ಚೌಗುಲೆ ಹಾಗೂ ಅಮರ ನಲವಡೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.