ಬೆಳಗಾವಿ : ಉಮೇಶ್ ಕತ್ತಿ ಔತಣಕೂಟದಲ್ಲಿ ಭಾಗಿಯಾಗಿದ್ದ ಶಾಸಕ ಅನಿಲ್ ಬೆನಕೆಗೆ ನಮಸ್ಕಾರ ಶಾಸಕರೇ, ದೊಡ್ಡ ಮುಖಂಡರೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಕಾಲೆಳೆದಿದ್ದಾರೆ.
ನಮಸ್ಕಾರ ಶಾಸಕರೇ, ದೊಡ್ಡ ಮುಖಂಡರೆ ಎಂದು ಶಾಸಕ ಅನಿಲ್ ಬೆನಕೆ ಕಾಲೆಳೆದ ಪ್ರಭಾಕರ್ ಕೋರೆ - Cold war Between MLA Anil Benake and Prabhakar Kore
ಬೆಳಗಾವಿ ನಗರದ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಕರೆದಿದ್ದ ಸುದ್ದಿಗೋಷ್ಠಿ ವೇಳೆ ಶಾಸಕ ಅನಿಲ್ ಬೆನಕೆ ಮತ್ತು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮುಖಾಮುಖಿಯಾಗಿದ್ದು, ಈ ವೇಳೆ ಬೆನಕೆಗೆ ಪರೋಕ್ಷವಾಗಿ ಕೋರೆ ಟಾಂಗ್ ನೀಡಿದ್ದಾರೆ.
ಶಾಸಕ ಅನಿಲ್ ಬೆನಕೆ ಕಾಲೆಳೆದ ಪ್ರಭಾಕರ ಕೋರೆ
ನಗರದ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಕರೆದಿದ್ದ ಸುದ್ದಿಗೋಷ್ಠಿ ವೇಳೆ ಶಾಸಕ ಅನಿಲ್ ಬೆನಕೆ ಮತ್ತು ಪ್ರಭಾಕರ ಕೋರೆ ಮುಖಾ ಮುಖಿಯಾಗಿದ್ದು, ಈ ವೇಳೆ ಬೆನಕೆಗೆ ಪರೋಕ್ಷವಾಗಿ ಕೋರೆ ಟಾಂಗ್ ನೀಡಿದ್ದಾರೆ.
ಶಾಸಕ ಅನಿಲ್ ಬೆನಕೆ ಕಾಲೆಳೆದ ಪ್ರಭಾಕರ ಕೋರೆ
ರಾಜಸಭಾ ಸದಸ್ಯ ಸ್ಥಾನಕ್ಕೆ ಈಗಾಗಲೇ ಉಮೇಶ್ ಕತ್ತಿ ಸಹೋದರ ಹಾಗೂ ಕೋರೆ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಉಮೇಶ್ ಕತ್ತಿ ಕೂಡ ಉತ್ತರ ಕರ್ನಾಟಕ 12 ಕ್ಕೂ ಹೆಚ್ಚು ಶಾಸಕರಿಗೆ ಭೋಜನ ಕೂಟ ಏರ್ಪಡಿಸಿ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದರು.