ಕರ್ನಾಟಕ

karnataka

ETV Bharat / state

ಕಾರ್ಖಾನೆ ಮುಟ್ಟುಗೋಲಿಗೆ ಮೈತ್ರಿ ಸರ್ಕಾರದ ಅಸ್ತ್ರ:  ಸೈಲೆಂಟ್​​ ಆಗೋದ್ರಾ ರೆಬಲ್​ ಶಾಸಕ? - undefined

ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ ಅವರ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಹೆಸರಲ್ಲಿ ಶಾಸಕರು ರಾಜ್ಯದ ವಿವಿಧ ಬ್ಯಾಂಕ್​ಗಳಿಂದ ಕೋಟ್ಯಂತರ ರೂ. ಸಾಲ ಪಡೆದಿದ್ದು, ಇನ್ನೂ ಕೂಡ ಮರುಪಾವತಿ ಮಾಡಿಲ್ಲ. ಆದ್ದರಿಂದ ಕಾರ್ಖಾನೆ ಮುಟ್ಟುಗೋಲು ಹಾಕಲು ಮೈತ್ರಿ ಸರ್ಕಾರ ಮುಂದಾಗಿದ್ದು, ಈ ಒಂದು ಕಾರಣದಿಂದ ರೆಬಲ್ ಶಾಸಕ ರಮೇಶ್​ ಜಾರಕಿಹೊಳಿ ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಗೋಕಾಕ ಶಾಸಕ ರಮೇಶ್​ ಜಾರಕಿಹೊಳಿ

By

Published : Jun 27, 2019, 2:15 PM IST

ಬೆಳಗಾವಿ:ರಾಜ್ಯದ ಪ್ರತಿಷ್ಠಿತ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಮರು ಪಾವತಿಸದೇ ಮುಟ್ಟುಗೋಲು ಭೀತಿಯಲ್ಲಿರುವ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳುವ ಸಲುವಾಗಿ ರೆಬಲ್ ಶಾಸಕ ರಮೇಶ್​ ಜಾರಕಿಹೊಳಿ ಸೈಲೆಂಟ್ ಆಗಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ

ಗೋಕಾಕ ಶಾಸಕ ರಮೇಶ್​ ಜಾರಕಿಹೊಳಿ

ಗೋಕಾಕ ಶಾಸಕ ರಮೇಶ್​ ಜಾರಕಿಹೊಳಿ ಅವರ ಮಾಲೀಕತ್ವದಲ್ಲಿರುವ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಹೆಸರಲ್ಲಿ ರಾಜ್ಯದ ವಿವಿಧ ಬ್ಯಾಂಕ್‍ಗಳಲ್ಲಿ 250 ಕೋಟಿ ರೂ. ಸಾಲ ಪಡೆದಿದ್ದಾರೆ. ನಿಗದಿತ ಸಮಯದಲ್ಲಿ ಸಾಲ ಪಾವತಿಸದೇ ಮೈತ್ರಿ ಸರ್ಕಾರ ಉರುಳಿಸುವ ಯತ್ನಕ್ಕೆ ಕೈ ಹಾಕಿದ್ದರು. ಸಾಲ ಮರುಪಾವತಿ ಮಾಡದಿದ್ದದ್ದಕ್ಕೆ ಕಾರ್ಖಾನೆ ಮುಟ್ಟುಗೋಲು ಹಾಕಲು ಮೈತ್ರಿ ಸರ್ಕಾರ ಮುಂದಾಗಿತ್ತು. ಈ ಅಸ್ತ್ರದಿಂದ ರಮೇಶ್​ ಜಾರಕಿಹೊಳಿ ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ರಮೇಶ್​ ಜಾರಕಿಹೊಳಿ ಅವರು ಬೆಂಗಳೂರಿನ ಅಪೆಕ್ಸ್ ಬ್ಯಾಂಕ್​ನಿಂದ 119 ಕೋಟಿ ರೂ. ವಿಜಯಪುರ ಡಿಸಿಸಿ ಬ್ಯಾಂಕ್‍ನಿಂದ 40 ಕೋಟಿ ರೂ. ತುಮಕೂರಿನ ಡಿಸಿಸಿ ಬ್ಯಾಂಕ್‍ನಿಂದ 31 ಕೋಟಿ ರೂ. ಮಂಗಳೂರಿನ ಸೌಥ್ ಕೆನರಾ ಡಿಸಿಸಿ ಬ್ಯಾಂಕ್‍ನಿಂದ 31 ಕೋಟಿ ರೂ ಹಾಗೂ ಶಿರಸಿ ಡಿಸಿಸಿ ಬ್ಯಾಂಕ್‍ನಿಂದ 31 ಕೋಟಿ ರೂ ಸೇರಿ ಒಟ್ಟು 253 ಕೋಟಿ ರೂಗಳನ್ನು ಕಾರ್ಖಾನೆ ಹೆಸರಲ್ಲಿ ಸಾಲ ಪಡೆದಿದ್ದಾರೆ. ಅಲ್ಲದೇ, ಸಾಲ ಮರುಪಾವತಿ ಮಾಡುವಂತೆ 6 ತಿಂಗಳ ಹಿಂದೆಯೇ ಅವರಿಗೆ ಅಪೆಕ್ಸ್ ಬ್ಯಾಂಕ್ ನೋಟಿಸ್ ಕೂಡ ನೀಡಿತ್ತು. ಸಾಲ ಮರುಪಾವತಿಸದೇ ಇರುವುದಕ್ಕೆ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಲು ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಚಿಂತನೆ ನಡೆಸಿದೆ. ಈ ಒಂದು ಕಾರಣದಿಂದ ಶಾಸಕರನ್ನು ಕಟ್ಟಿ ಹಾಕುವಲ್ಲಿ ಮೈತ್ರಿ ಸರ್ಕಾರ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.

ಅತೃಪ್ತ ಶಾಸಕರ ಬಣದ ಮುಂದಾಳಾತ್ವ ವಹಿಸಿದ್ದ ರಮೇಶ್​ ಜಾರಕಿಹೊಳಿ ಬಿಜೆಪಿ ಸರ್ಕಾರದ ರಚನೆಗೆ ಶತ ಪ್ರಯತ್ನ ಮಾಡಿದ್ದರು. ಆದರೆ, ಮೈತ್ರಿ ಸರ್ಕಾರದ ಅಸ್ತ್ರಕ್ಕೆ ಫುಲ್ ಸೈಲೆಂಟ್ ಆಗಿರುವ ಶಾಸಕರು ಕಳೆದೊಂದು ತಿಂಗಳಿನಿಂದ ಗೋಕಾಕಿನತ್ತ ಮುಖ ಮಾಡಿಲ್ಲ. ಇವರ ಮಾಲೀಕತ್ವದ ಕಾರ್ಖಾನೆ ಕೋಟ್ಯಂತರ ರೂ. ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡಿದೆ ಎಂದು ಆರೋಪಿಸಿ ರೈತರು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ರೈತರಿಗೆ ಬಾಕಿ ಬಿಲ್ ನೀಡದೇ ಸಕ್ಕರೆ ಕಾರ್ಖಾನೆ ಹೆಸರಲ್ಲಿ ರಮೇಶ್​ ಜಾರಕಿಹೊಳಿ ನೂರಾರು ಕೋಟಿ ರೂ. ಸಾಲ ಪಡೆದಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಕ್ಕರೆ ಕಾರ್ಖಾನೆ ಹೆಸರಲ್ಲಿ ಪಡೆದ ಸಾಲ, ಸಕ್ಕರೆ ಮಾರಿದ ಹಣ ಎಲ್ಲಿಗೆ ಹೋಯಿತು. ಇದನ್ನು ರಾಜಕೀಯವಾಗಿ ಬಳಸಿಕೊಳ್ಳದೇ ರೈತರ ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಕಬ್ಬು ಬೆಳೆಗಾರರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details