ಕರ್ನಾಟಕ

karnataka

ETV Bharat / state

ದೇಶದಲ್ಲೇ ಮೊದಲ ಬಾರಿ ಬೆಳೆ ಹಾನಿಗೆ ಭಾರಿ ಮೊತ್ತದ ಪರಿಹಾರ.. ಸಿಎಂ ಬಿಎಸ್‌ವೈ ಭರವಸೆ - Maharashtra Yeddyurappa Travel News

ಮೊದಲ ಬಾರಿಗೆ ಬೆಳೆ ನಾಶ ಆದವರಿಗೆ ಹೆಚ್ಚು ಹಣ ಕೊಡುವ ತೀರ್ಮಾನ ಮಾಡಲಾಗಿದೆ. ಒಣ ಭೂಮಿಗೆ ₹16,500 ನೀರಾವರಿಗೆ ₹ 23 ಸಾವಿರ, ತೋಟಗಾರಿಕೆ ಬೆಳೆಗೆ 28 ಸಾವಿರ ರೂ. ಪರಿಹಾರ ನೀಡಲಾಗುತ್ತಂತೆ.

ಬೆಳಗಾವಿಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ

By

Published : Oct 15, 2019, 9:09 PM IST

Updated : Oct 16, 2019, 2:56 PM IST

ಬೆಳಗಾವಿ : ದೇಶದಲ್ಲಿ ಮೊದಲ ಬಾರಿಗೆ ಬೆಳೆ ನಾಶ ಆದವರಿಗೆ ಹೆಚ್ಚು ಹಣ ಕೊಡುವ ತೀರ್ಮಾನ ಮಾಡಲಾಗಿದೆ. ಒಣ ಭೂಮಿಗೆ ₹16,500, ನೀರಾವರಿಗೆ ₹23 ಸಾವಿರ, ತೋಟಗಾರಿಕೆ ಬೆಳೆಗೆ ₹28 ಸಾವಿರ ಪರಿಹಾರ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಯಾರಿಗೂ ವ್ಯತ್ಯಾಸ ಆಗದಂತೆ ಸಂತ್ರಸ್ತರಿಗೆ ಪರಿಹಾರ ನೀಡುತ್ತೇವೆ. ಯತ್ನಾಳ ಅವರಿಗೆ ಯಾವುದೇ ಹೇಳಿಕೆ‌ ನೀಡದಂತೆ ಸೂಚನೆ ಕೊಟ್ಟಿದ್ದೇನೆ. ಉಮೇಶ್ ಕತ್ತಿ ಅವರ ಜತೆಗೆ ಮಾತನಾಡಿದ್ದೇನೆ ಯಾವುದೇ ಅಸಮಾಧಾನ ಇಲ್ಲ. ರಾಜು ಕಾಗೆ ಮತ್ತು ಅಶೋಕ ಪೂಜಾರಿಗೂ ಕೂಡ ಅಸಮಾಧಾನ ಇಲ್ಲ. ಅವರೊಂದಿಗೆ ಮಾತುಕತೆ ಮಾಡಿದ್ದೇನೆ. ಟಿಕೆಟ್ ತಪ್ಪುವ ಬಿಜೆಪಿ ನಾಯಕರು ಕಾಂಗ್ರೆಸ್ ಕದತಟ್ಟುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ಬೆಳಗಾವಿಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ..

ಔರಾದ್ಕರ್ ವರದಿಗೆ ಸಹಿ ಮಾಡಲಾಗಿದೆ. ರಾಜ್ಯ ಪೊಲೀಸರಿಗೆ ಶೀಘ್ರದಲ್ಲಿ ಸಿಹಿ ಸುದ್ದಿ ನೀಡಲಿದ್ದೇವೆ. ಅನರ್ಹ ಶಾಸಕರ ಕುರಿತು ಅ. 25ರ ನಂತರ ಮಾತನಾಡುತ್ತೇನೆ ಎಂದರು.ದೇಶದಲ್ಲಿ ಇನ್ನೂ ಮುಂದೆ ಬರುವ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ದ. ಶಿವಸೇನೆ ಜತೆಗೆ ಸೇರಿರೋ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಕಾಂಗ್ರೆಸ್ ಮುಕ್ತ ಭಾರತವಾಗುತ್ತದೆ ಎಂದು ಭವಿಷ್ಯ ನುಡಿದರು.

ಮಹಾರಾಷ್ಟ್ರ ಪ್ರವಾಸ :

ನಾಳೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಭಾಗಿಯಾಗುವ ಹಿನ್ನೆಲೆ ಬೆಳಗಾವಿಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಜತ್ತಗೆ ತೆರಳಲಿರುವ ಸಿಎಂಗೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಶಾಸಕ ಅನಿಲ ಬೆನಕೆ ಸಾಥ್ ನೀಡಲಿದ್ದಾರೆ.

Last Updated : Oct 16, 2019, 2:56 PM IST

ABOUT THE AUTHOR

...view details