ಬೆಳಗಾವಿ:ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ತೆರಳುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಗೊಂದಲಕ್ಕೆ ಸಿಲುಕಿದ ಪ್ರಸಂಗ ನಡೆಯಿತು.
ಮಹಾರಾಷ್ಟ್ರ ಚುನಾವಣಾ ಪ್ರಚಾರ... ಹೆಲಿಕಾಪ್ಟರ್ ಬಾರದ ಕಾರಣ ಗೊಂದಲದಲ್ಲಿ ಸಿಎಂ ಬಿಎಸ್ವೈ - ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಸುದ್ದಿ
ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ತೆರಳುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಗೊಂದಲಕ್ಕೆ ಸಿಲುಕಿದ ಪ್ರಸಂಗ ನಡೆಯಿತು.
ಮಹಾರಾಷ್ಟ್ರ ಗಡಿ ಭಾಗದ ಕನ್ನಡ ಭಾಷಿಕರ ಮತಬೇಟೆಗೆ ಸಿಎಂ ಯಡಿಯೂರಪ್ಪ ತೆರಳಬೇಕಿತ್ತು. ಈ ಕಾರಣಕ್ಕೆ ಬೆಂಗಳೂರಿನಿಂದ ನಿನ್ನೆಯೇ ಸಿಎಂ ಬೆಳಗಾವಿಗೆ ಬಂದು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಪುಣೆಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿಲ್ಲ. ಸಿಎಂ ಟಿಪಿ ಪ್ರಕಾರ 8.50ಕ್ಕೆ ಹೆಲಿಕಾಪ್ಟರ್ ಸಾಂಬ್ರಾದಿಂದ ಮಹಾರಾಷ್ಟ್ರದ ಜತ್ಗೆ ತೆರಳಬೇಕಿತ್ತು. ಆದರೆ ಎರಡು ಗಂಟೆಗಳಾದರೂ ಹೆಲಿಕಾಪ್ಟರ್ ಆಗಮಿಸಿಲ್ಲ. ಹೀಗಾಗಿ ಸಿಡಿಮಿಡಿಗೊಂಡ ಸಿಎಂ ಮಹಾರಾಷ್ಟ್ರ ಪ್ರವಾಸ ರದ್ದುಪಡಿಸಿ ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದರು. ಅಲ್ಲದೇ ಪೊಲೀಸ್ ಗೌರವ ವಂದನೆಯನ್ನೂ ಯಡಿಯೂರಪ್ಪ ಸ್ವೀಕರಿಸಿದ್ದರು.
ಈ ವೇಳೆ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಟ ಮೊಬೈಲಿಗೆ ಫೋನ್ ಮಾಡಿದ ಡಿಸಿಎಂ ಲಕ್ಷ್ಮಣ ಸವದಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. 10:30ಕ್ಕೆ ಹೆಲಿಕಾಪ್ಟರ್ ಬೆಳಗಾವಿಗೆ ಬರಲಿದ್ದು, ಪ್ರಚಾರಕ್ಕೆ ಬರುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಮಯ ಮುಗಿದಿದೆ. ಅಲ್ಲಿಗೆ ಬಂದು ಪ್ರಯೋಜನವಿಲ್ಲ. ಪ್ರವಾಸ ರದ್ದು ಮಾಡುತ್ತೇನೆ ಬಿಡಿ ಎಂದರು. ಪ್ರಚಾರಕ್ಕೆ ನೀವು ಬರಲೇಬೇಕು ಎಂಬ ಡಿಸಿಎಂ ಕೋರಿಕೆಗೆ ಸ್ಪಂದಿಸಿದ ಸಿಎಂ ಮರಳಿ ಪ್ರವಾಸಿ ಮಂದಿರದ ಕೊಠಡಿಗೆ ತೆರಳಿದರು.