ಕರ್ನಾಟಕ

karnataka

ETV Bharat / state

ಕೈ ಕೊಟ್ಟ ಸಿಎಂ ಹೆಲಿಕಾಪ್ಟರ್​​​​​​​​: ಬೆಳಗಾವಿಯ ಅತಿಥಿ ಗೃಹದಲ್ಲಿ ಸ್ಥಳೀಯ ಶಾಸಕರೊಂದಿಗೆ ಮಹತ್ವದ ಮಾತುಕತೆ - ಬೆಳಗಾವಿ ನಗರದ ಅತಿಥಿ ಗೃಹದಲ್ಲಿ ಸಭೆ

ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ತೆರಳಬೇಕಿದ್ದ ಸಿಎಂ ಯಡಿಯೂರಪ್ಪರ ಹೆಲಿಕಾಪ್ಟರ್ ಕೈ ಕೊಟ್ಟಿದೆ. ಹೀಗಾಗಿ ಪರ್ಯಾಯ ಹೆಲಿಕಾಪ್ಟರ್ ಬರುವ ತನಕ‌‌ ಸಿಎಂ ಸ್ಥಳೀಯರೊಂದಿಗೆ ಸಭೆ ನಡೆಸಿದ್ದಾರೆ.

ಕೈ ಕೊಟ್ಟ ಸಿಎಂ ಹೆಲಿಕಾಪ್ಟರ್: ನಗರದ ಅತಿಥಿ ಗೃಹದಲ್ಲಿ ಸ್ಥಳೀಯ ಶಾಸಕರೊಂದಿಗೆ ಮಹತ್ವದ ಮಾತುಕತೆ

By

Published : Oct 16, 2019, 10:25 AM IST

Updated : Oct 16, 2019, 11:36 AM IST

ಬೆಳಗಾವಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ನಗರದ ಅತಿಥಿ ಗೃಹದಲ್ಲಿ ಸ್ಥಳೀಯ ಶಾಸಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಕೈ ಕೊಟ್ಟ ಸಿಎಂ ಹೆಲಿಕಾಪ್ಟರ್: ನಗರದ ಅತಿಥಿ ಗೃಹದಲ್ಲಿ ಸ್ಥಳೀಯ ಶಾಸಕರೊಂದಿಗೆ ಮಹತ್ವದ ಮಾತುಕತೆ

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಬೇಕಿದ್ದ ಸಿಎಂ ಯಡಿಯೂರಪ್ಪ ಅವರ ಹೆಲಿಕಾಪ್ಟರ್​​ ಕೈ ಕೊಟ್ಟಿದೆ. ಹೀಗಾಗಿ ಪರ್ಯಾಯ ಹೆಲಿಕಾಪ್ಟರ್​ ಬರುವ ತನಕ‌‌ ಸಿಎಂ ಸ್ಥಳೀಯರೊಂದಿಗೆ ಸಭೆ ನಡೆಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿರುವ ಬಿಎಸ್​ವೈ, ಸ್ಥಳೀಯ ಶಾಸಕರೊಂದಿಗೆ ಚರ್ಚಿಸುತ್ತಿದ್ದಾರೆ. ಇನ್ನು ಇದೇ ವೇಳೆ ಬಿಜೆಪಿ ಹಿರಿಯ ನಾಯಕ ಉಮೇಶ್​​ ಕತ್ತಿ ಅವರಿಗೆ ಒಳ್ಳೆಯ ಸ್ಥಾನಮಾನ ‌ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ ಎನ್ನಲಾಗಿದೆ.

ಉಪ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರ ಗೆಲ್ಲುವ ಕುರಿತು ಕೂಡ ಚರ್ಚೆ ನಡೆಸಲಾಗಿದೆ. ಶಾಸಕರಾದ ಉಮೇಶ್ ಕತ್ತಿ, ಅನಿಲ ಬೆನಕೆ, ಅಭಯ್ ಪಾಟೀಲ್, ಮಹಾಂತೇಶ್ ಕವಟಗಿಮಟ ಸೇರಿದಂತೆ ‌ಸ್ಥಳೀಯ ಮುಖಂಡರು ‌ಸಭೆಯಲ್ಲಿ ಭಾಗಿಯಾಗಿದ್ದಾರೆ.

ಸದ್ಯ ಪರ್ಯಾಯ ಹೆಲಿಕಾಫ್ಟರ್ ವ್ಯವಸ್ಥೆ ಮಾಡಲು ಹರಸಾಹಸ ಪಡಲಾಗ್ತಿದೆ. ಒಂದು ವೇಳೆ ಪರ್ಯಾಯ ವ್ಯವಸ್ಥೆ ಆಗದೇ ಇದ್ರೆ ರಸ್ತೆ ಮೂಲಕವೇ ಬಿ.ಎಸ್.ಯಡಿಯೂರಪ್ಪ ಪ್ರಯಾಣ ಬೆಳೆಸಲಿದ್ದಾರೆ.

Last Updated : Oct 16, 2019, 11:36 AM IST

ABOUT THE AUTHOR

...view details