ಬೆಳಗಾವಿ:ನಮ್ಮ ವರಿಷ್ಠರ ಸಲಹೆ ಪಡದುಕೊಂಡು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕೆಲ ಸಂಪುಟ ಸಹೋದ್ಯೋಗಿಗಳ ಖಾತೆ ಬದಲಿಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಖಾತೆಗಳ ಬದಲಾವಣೆ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಟೀಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ, ಖಾತೆಗಳ ಅದಲು ಬದಲು ಮಾಡುವ ಅಧಿಕಾರ ಮುಖ್ಯಮಂತ್ರಿಗಿದೆ. ವರಿಷ್ಠರ ಜತೆಗೆ ಚರ್ಚಿಸಿಯೇ ಸಿಎಂ ಈ ತೀರ್ಮಾನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪದಲ್ಲಿ ಯಾವುದೇ ಹರುಳಿಲ್ಲ. ರಾಜಕೀಯಕ್ಕಾಗಿ ಈ ಹೇಳಿಕೆ ನೀಡಿರಬಹುದು. ಇಲಾಖೆ ಬದಲಾದ್ರೇ ಅಸಮರ್ಥರು ಅಂತಲ್ಲ. ಒಳ್ಳೆ ಕೆಲಸ ಆಗಬೇಕು ಅಂತ ತೀರ್ಮಾನ ಮಾಡಲಾಗಿದೆ ಎಂದರು.