ಚಿಕ್ಕೋಡಿ :ದಿಲ್ಲಿಗೆ ಹೋಗುವವರು ತಮ್ಮ ಇಲಾಖೆ ಕಾರ್ಯಗಳ ಪ್ರಯುಕ್ತ ಹೋಗಿರುತ್ತಾರೆ. ನಾವೂ ನಮ್ಮ ಇಲಾಖೆಗೆ ಸಂಬಂಧಿಸಿದಂತೆ ದೆಹಲಿಗೆ ಹೋಗಿರುತ್ತೇವೆ. ಹೀಗಾಗಿ ಸಿಎಂ ಬದಲಾವಣೆ ಕೇವಲ ವದಂತಿ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ನಾಯಕತ್ವ ಬದಲಾವಣೆ ಕೇವಲ ವದಂತಿ: ಸಚಿವ ಶ್ರೀಮಂತ ಪಾಟೀಲ - ನಾಯಕತ್ವ ಬದಲಾವಣೆ ವದಂತಿ ಎಂದ ಸಚಿವ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ ಕೇವಲ ವದಂತಿ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
![ನಾಯಕತ್ವ ಬದಲಾವಣೆ ಕೇವಲ ವದಂತಿ: ಸಚಿವ ಶ್ರೀಮಂತ ಪಾಟೀಲ srimantha](https://etvbharatimages.akamaized.net/etvbharat/prod-images/768-512-09:02:39:1622561559-kn-ckd-2-cm-badalavane-kevala-vadanti-script-ka10023-01062021203940-0106f-1622560180-209.jpg)
srimantha
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಕಾರ್ಯಾಲಯದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಅತೃಪ್ತರು ದೆಹಲಿಗೆ ತೆರಳುವ ವಿಚಾರವಾಗಿ ಪ್ರತಿಕ್ರಿಯಿಸಿ, ದೆಹಲಿ ನಮ್ಮ ದೇಶದ ರಾಜಧಾನಿ, ಅಲ್ಲಿಗೆ ಹೋದರೆ ಸುಮ್ಮನೆ ನಾಯಕತ್ವ ಬದಲಾವಣೆ ಅನ್ನುವುದು ಸರಿ ಅಲ್ಲ, ಸಿಎಂ ಬದಲಾವಣೆ ಬರೀ ವದಂತಿ ಎಂದು ಹೇಳಿದರು.