ಕರ್ನಾಟಕ

karnataka

ETV Bharat / state

ಮುಂದಿನ ದಿನಗಳಲ್ಲಿ ರಾಜ್ಯಪಾಲ, ರಾಷ್ಟ್ರಪತಿ ಆಗ್ತೀರಿ: ಸಿಎಂಗೆ ಭವಿಷ್ಯ ನುಡಿದ ಜೈನಮುನಿಗಳು - ಬೆಳಗಾವಿ ಲೋಕಸಭಾ ಚುನಾವಣೆ

ಬೆಳಗಾವಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿಸಿದ ಸಿಎಂ ಬಿಎಸ್​ವೈ ಹಲಗಾ ಗ್ರಾಮದ ಜೈನ ಬಸದಿಗೆ ಭೇಟಿ ನೀಡಿ ಮುನಿಗಳ ಆಶೀರ್ವಾದ ಪಡೆದರು. ಇದೇ ಸಿಎಂ ಬಿಎಸ್​ವೈ ಬಗ್ಗೆ ಮುನಿಗಳು ಭವಿಷ್ಯ ನುಡಿದರು.

CM BSY Visited Jain Basadi at Belgavi
ಸಿಎಂಗೆ ಭವಿಷ್ಯ ನುಡಿದ ಜೈನಮುನಿಗಳು

By

Published : Apr 6, 2021, 9:43 PM IST

ಬೆಳಗಾವಿ:ಎರಡೂವರೆ ವರ್ಷ ಸಿಎಂ ಆಗಿ ಅವಧಿ ಪೂರೈಸುತ್ತೀರಿ, ಮುಂಬರುವ ದಿನಗಳಲ್ಲಿ ರಾಜ್ಯಪಾಲ, ಉಪರಾಷ್ಟ್ರಪತಿ ಆಗುತ್ತೀರಿ ಎಂದು ಬಾಲಾಲ ಆಚಾರ್ಯ ಸಿದ್ಧಸೇನಾ ಜೈನಮುನಿಗಳು ಸಿಎಂ ಬಿಎಸ್​ವೈ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ತಾಲೂಕಿನ ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇನಾ ಜೈನ ಬಸದಿಗೆ ಭೇಟಿ ನೀಡಿದ ಸಿಎಂ ಬಿಎಸ್‌ವೈ ಮುನಿಗಳ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಮಾತನಾಡಿದ ಜೈನಮುನಿಗಳು, ಎರಡೂವರೆ ವರ್ಷ ಸಿಎಂ ಆಗಿ ಅವಧಿಯನ್ನು ಪೂರೈಸುತ್ತೀರಿ ಎಂದು ಸಿಎಂ ಬಿಎಸ್​ವೈ ಮುಂದೆ ಹೇಳಿದರು. ಈ ವೇಳೆ ಮುನಿಗಳು ಮಾತನ್ನು ಅರ್ಧಕ್ಕೆ ತಡೆದ ಸಿಎಂ, ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆಲ್ತಾರೋ, ಇಲ್ಲವೋ ಹೇಳಿ ಎಂದರು‌. ಈ ವೇಳೆ ಮಾತು ಮುಂದುವರೆಸಿದ ಮುನಿಗಳು, ಮಂಗಳಾ ಅಂಗಡಿ ಸುಮಾರು 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ದಿ.ಸುರೇಶ್​ ಅಂಗಡಿಯವರ ಕಾರ್ಯಗಳು ಅವರ ಕೈಹಿಡಿಯಲಿವೆ ಎಂದರು. ಇದೇ ವೇಳೆ‌ ಸಿಎಂ ಬಿಎಸ್​​​ವೈಗೆ ರಾಜ್ಯಪಾಲರಾಗುತ್ತೀರಿ, ಇಲ್ಲವೇ ಉಪರಾಷ್ಟ್ರಪತಿ, ರಾಷ್ಟ್ರಪತಿ ಆಗುತ್ತೀರಿ ಎಂದು ಆಶೀರ್ವಾದ ಮಾಡಿದರು.

ಸಿಎಂಗೆ ಭವಿಷ್ಯ ನುಡಿದ ಜೈನಮುನಿಗಳು

ಓದಿ : ಪ್ರಚಾರದಿಂದ ದೂರ ಉಳಿದ ಸಾಹುಕಾರ್ ಕುಟುಂಬ: ಬೆಂಬಲಿಗರ ಮೂಲಕ ಮತ ಯಾಚನೆ..!

ಡಿಕೆಶಿ ಸಿಎಂ ಆಗ್ತಾರೆ ಎಂದು ಮುನಿಗಳು : ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೂಡ ಹಲಗಾ ಗ್ರಾಮದ ಜೈನ ಬಸದಿಗೆ ಭೇಟಿ ನೀಡಿದ್ದರು. ಈ ವೇಳೆ ಬಾಲಾಲ ಆಚಾರ್ಯ ಸಿದ್ಧಸೇನಾ ಜೈನ ಮುನಿಗಳು, ನೀವು ಸಿಎಂ ಆಗುತ್ತೀರಿ ಎಂದು ಡಿಕೆಶಿಗೆ ಆಶೀರ್ವಾದ ಮಾಡಿದರು.

ABOUT THE AUTHOR

...view details