ಕರ್ನಾಟಕ

karnataka

ETV Bharat / state

ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಹರಿಭಾವು ವಝೆ ಆರೋಗ್ಯ ವಿಚಾರಿಸಿದ ಸಿಎಂ - Belgavi

ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಹರಿಭಾವು ವಝೆ ಅವರನ್ನು ಭೇಟಿಯಾದ ಸಿಎಂ ಕೆಲ ಹೊತ್ತು ಅವರ ಆರೋಗ್ಯ ವಿಚಾರಿಸಿದರು.

CM BSY Visited Hospital
ಹರಿಭಾವು ವಝೆ ಆರೋಗ್ಯ ವಿಚಾರಿಸಿದ ಸಿಎಂ

By

Published : Jun 4, 2021, 1:45 PM IST

ಬೆಳಗಾವಿ: ಅನಾರೋಗ್ಯದದಿಂದ ಬಳಲುತ್ತಿರುವ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಹರಿಭಾವು ವಝೆ ಅವರನ್ನು ಭೇಟಿಯಾದ ಸಿಎಂ ಬಿಎಸ್‌ವೈ, ಅವರ ಆರೋಗ್ಯ ವಿಚಾರಿಸಿ ಬೇಗ ಗುಖಮುಖರಾಗಲೆಂದು ಹಾರೈಸಿದರು.

ಹರಿಭಾವು ವಝೆ ಆರೋಗ್ಯ ವಿಚಾರಿಸಿದ ಸಿಎಂ..

ಶಾಸ್ತ್ರೀನಗರದ ಗೂಡ್ಸ್‌ಶೇಡ್ ರಸ್ತೆಯಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿ, ಹರಿಭಾವು ಅವರ ಆರೋಗ್ಯ ವಿಚಾರಿಸಿದರು. ಸಿಎಂ ‌ಬಿಎಸ್​ವೈ ಅವರಿಗೆ ಡಿಸಿಎಂ‌ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಸಚಿವರಾದ ಉಮೇಶ್​​ ಕತ್ತಿ, ಮಹೇಶ್​​​ ಕುಮಟಳ್ಳಿ, ಶಾಸಕ ಅಭಯ್ ಪಾಟೀಲ, ಕಾಡಾ ಅಧ್ಯಕ್ಷ ವಿ.ಐ.ಪಾಟೀಲ ಸಾಥ್ ನೀಡಿದರು‌.

ಕಳೆದ 85 ವರ್ಷಗಳಿಂದ ಬೆಳಗಾವಿ ಆರ್‌ಎಸ್‌ಎಸ್ ಕಚೇರಿಯಲ್ಲಿ ವಾಸವಿರುವ ಹರಿಭಾವು ಅವರು ಆರ್‌ಎಸ್‌ಎಸ್ ಸಂಘಟನೆ‌ಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು‌. ಅವರ 85 ವರ್ಷದ ಅವಧಿಯಲ್ಲಿ ಹಲವಾರು ಪ್ರಚಾರಕ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಂಘಟನೆಯಲ್ಲಿ ಮುಂದಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಹರಿಭಾವು ವಝೆ ಅವರನ್ನು ಭೇಟಿಯಾದ ಸಿಎಂ, ಕೆಲ ಹೊತ್ತು ಅವರ ಆರೋಗ್ಯ ವಿಚಾರಿಸಿದರು.

ABOUT THE AUTHOR

...view details