ಕರ್ನಾಟಕ

karnataka

ETV Bharat / state

ಕಾಂಗ್ರೆಸ್​-ಜೆಡಿಎಸ್ ಅಧಿಕಾರದ ಭ್ರಮೆಯಲ್ಲಿವೆ : ಸಿಎಂ ಬಿಎಸ್ ಯಡಿಯೂರಪ್ಪ - ಕಾಂಗ್ರೆಸ್​ ಹಾಗೂ ಜೆಡಿಎಸ್ ವಿರುದ್ಧ ಬಿಎಸ್ ಯಡಿಯೂರಪ್ಪ ವಾಗ್ದಾಳಿ

ಬಿಜೆಪಿಗೆ ಬಹುಮತ ಬರಬಾರದೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಯಸಿದ್ದು, ಅವರು ಮೂರು ತಿಂಗಳಲ್ಲಿ ಮತ್ತೊಮ್ಮೆ ಚುನಾವಣೆಗೆ ಹೋಗುವ ಭ್ರಮೆಯಲ್ಲಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅಥಣಿಯಲ್ಲಿ ಬಿಜೆಪಿ ಸಮಾವೇಶ
ಅಥಣಿಯಲ್ಲಿ ಬಿಜೆಪಿ ಸಮಾವೇಶ

By

Published : Dec 3, 2019, 5:04 AM IST

Updated : Dec 3, 2019, 6:43 AM IST

ಬೆಳಗಾವಿ: ಬಿಜೆಪಿಗೆ ಬಹುಮತ ಬರಬಾರದೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಯಸಿದ್ದು, ಅವರು ಮೂರು ತಿಂಗಳಲ್ಲಿ ಮತ್ತೊಮ್ಮೆ ಚುನಾವಣೆಗೆ ಹೋಗುವ ಭ್ರಮೆಯಲ್ಲಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಅಥಣಿಯ ಪಶು ವೈದ್ಯಕೀಯ ಮತ್ತು ಕೃಷಿ ಕಾಲೇಜು ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಹಾಗೂ ಅಥಣಿಗೆ ನೀರಾವರಿ ಯೋಜನೆಗೆ ಮಹತ್ವ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಥಣಿಯಲ್ಲಿ ಬಿಜೆಪಿ ಸಮಾವೇಶ

ಈ ಮೊದಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಥಣಿಗೆ ಪಶು ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದೆ. ಕಾಂಗ್ರೆಸ್​ನವರು ಅದನ್ನು ಪೂರ್ಣ ಮಾಡಲಿಲ್ಲ. ಅದನ್ನು ಪೂರ್ಣ ಮಾಡಲು ನಾನೇ ಬರಬೇಕಾಯಿತು ಎಂದರು.

ಅಭಿವೃದ್ದಿಯೊಂದೇ ನನ್ನ ಕನಸಾಗಿದ್ದು, ಅದಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದರು. ಮೂರುವರೆ ವರ್ಷದ ಬಳಿಕ 150 ಸ್ಥಾನ ಗೆದ್ದು ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Dec 3, 2019, 6:43 AM IST

For All Latest Updates

ABOUT THE AUTHOR

...view details