ಕರ್ನಾಟಕ

karnataka

ಕೋವಿಡ್ ಸಂಬಂಧಿತ ವಿಶೇಷ ಬಸ್​ಗಳನ್ನು ಲೋಕಾರ್ಪಣೆಗೊಳಿಸಿದ ಸಿಎಂ ಬಿಎಸ್‌ವೈ

By

Published : Jun 4, 2021, 5:14 PM IST

ಸಾರಿಗೆ ಸಂಸ್ಥೆಯ ಹಲವು ಬಸ್‌ಗಳಲ್ಲಿ ಮಹಿಳೆಯರ ಶೌಚಾಲಯ, ಮಗು ಆರೈಕೆ ವಿಭಾಗ ರೂಪಿಸಿ ಕೋವಿಡ್ ತುರ್ತು ಪರಿಸ್ಥಿತಿಯ ಸೇವೆಗೆ ಸಜ್ಜುಗೊಳಿಸಲಾಗಿದೆ. ಇದಲ್ಲದೇ ಕೆಲ ಬಸ್‌ಗಳನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ. ಅಗತ್ಯವಿರುವ ಆಕ್ಸಿಜನ್ ಸೇರಿದಂತೆ ಎಲ್ಲ ಮೆಡಿಕಲ್ ಸೌಲಭ್ಯಗಳನ್ನ ಬಸ್​ನಲ್ಲಿ ಒದಗಿಸಲಾಗಿದೆ..

ಸಿಎಂ ಬಿಎಸ್‌ವೈ
ಸಿಎಂ ಬಿಎಸ್‌ವೈ

ಬೆಳಗಾವಿ :ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಆ್ಯಂಬುಲೆನ್ಸ್, ಮಹಿಳೆಯರ ಶೌಚಾಲಯ, ಮಗು ಆರೈಕೆ ವಿಭಾಗ ಒಳಗೊಂಡ ವಿಶೇಷ ಬಸ್​ಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

ಕೋವಿಡ್ ಸೋಂಕಿತರಿಗೆ ಬೆಡ್, ಆಕ್ಸಿಜನ್, ಚಿಕಿತ್ಸೆ ಹಾಗೂ ರೋಗಿಗಳನ್ನು ಸಾಗಿಸಲು ಆ್ಯಂಬುಲೆನ್ಸ್ ಕೊರತೆ ನೀಗಿಸಲು ಸಾರಿಗೆ ಸಂಸ್ಥೆ, ಸರ್ಕಾರದ ಜೊತೆಗೆ ಕೈಜೋಡಿಸಿದೆ. ಸಾರಿಗೆ ಸಂಸ್ಥೆಯ ಹಲವು ಬಸ್‌ಗಳಲ್ಲಿ ಮಹಿಳೆಯರ ಶೌಚಾಲಯ, ಮಗು ಆರೈಕೆ ವಿಭಾಗ ರೂಪಿಸಿ ಕೋವಿಡ್ ತುರ್ತು ಪರಿಸ್ಥಿತಿಯ ಸೇವೆಗೆ ಸಜ್ಜುಗೊಳಿಸಲಾಗಿದೆ.

ಇದಲ್ಲದೇ ಕೆಲ ಬಸ್‌ಗಳನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ. ಅಗತ್ಯವಿರುವ ಆಕ್ಸಿಜನ್ ಸೇರಿದಂತೆ ಎಲ್ಲ ಮೆಡಿಕಲ್ ಸೌಲಭ್ಯಗಳು ಬಸ್​ನಲ್ಲಿ ಒದಗಿಸಲಾಗಿದೆ.

ಕೋವಿಡ್ ಸಂಬಂಧಿತ ವಿಶೇಷ ಬಸ್​ಗಳ ಲೋಕಾರ್ಪಣೆ..

ಬಳಿಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣಕುಮಾರ್ ಮಾತನಾಡಿ, ಸಾರಿಗೆ ಸಂಸ್ಥೆಯ ಹಲವು ಬಸ್‌ಗಳಲ್ಲಿ ಮಹಿಳೆಯರ ಶೌಚಾಲಯ, ಮಗು ಆರೈಕೆ ವಿಭಾಗವನ್ನು ಒಳಗೊಂಡಂತೆ ವಿನ್ಯಾಸಗೊಳಿಸಿ ಕೋವಿಡ್ ತುರ್ತು ಪರಿಸ್ಥಿತಿಯ ಸೇವೆಗೆ ಬಸ್​ಗಳನ್ನು ಸಜ್ಜುಗೊಳಿಸಲಾಗಿದೆ.

ಪ್ರತಿ ಬಸ್‌ನಲ್ಲೂ ಎರಡು ದೇಶೀಯ ಮತ್ತು ಎರಡು ವಿದೇಶಿ ಮಾದರಿಯ ಶೌಚಾಲಯಗಳಿವೆ. ಮರು ಆರೈಕೆ ವಿಭಾಗ ಇದ್ದು, ಆಕ್ಸಿಜನ್ ಸೇರಿದಂತೆ ಎಲ್ಲ ಮೆಡಿಕಲ್ ಸೌಲಭ್ಯಗಳು ಇರುವ ವಿಶೇಷ ಬಸ್ಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಿದರು ಎಂದು ತಿಳಿಸಿದರು.

ABOUT THE AUTHOR

...view details