ಕರ್ನಾಟಕ

karnataka

ETV Bharat / state

ನಾನಿಲ್ಲಿ ಪ್ರವಾಹ ಪ್ರದೇಶದ ಭೇಟಿಗೆ ಬಂದಿದ್ದೇನೆ, ನಾಯಕತ್ವ ಚರ್ಚೆ ಬೇಡ: ಬಿಎಸ್‌ವೈ

ರೈತಾಪಿ ವರ್ಗ ಆತಂಕಕ್ಕೆ ಒಳಗಾಗುವುದು ಬೇಡ. ಸರ್ಕಾರ ಅವರ ಜೊತೆ ಇದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಯಮಗರಣಿಯಲ್ಲಿ ಹಾನಿಗೊಳಗಾದ ಪ್ರದೇಶದ ಭೇಟಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

cm-bs-yadiyurappa
ಸಿಎಂ ಬಿ. ಎಸ್​. ಯಡಿಯೂರಪ್ಪ

By

Published : Jul 25, 2021, 3:16 PM IST

ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ಹಾಗೂ ಸಂತ್ರಸ್ತರಿಗೆ ಸಾಂತ್ವನ ಹೇಳಲು ಬಂದಿದ್ದೇನೆ. ನಾಯಕತ್ವ ಬದಲಾವಣೆ ಚರ್ಚೆಗಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಿಎಂ ಬಿ.ಎಸ್​.ಯಡಿಯೂರಪ್ಪ

ಹಾನಿಪೀಡಿತ ಪ್ರದೇಶಕ್ಕೆ ಆರ್.ಅಶೋಕ್​, ಗೋವಿಂದ ಕಾರಜೋಳ ಜೊತೆ ಭೇಟಿ ನೀಡಿದ್ದೇನೆ. ಜಿಲ್ಲಾಧಿಕಾರಿ ಕಚೇರಿಯಿಂದ ಹಾನಿಯ ಎಲ್ಲ ವರದಿ ತೆಗೆದುಕೊಳ್ಳುವೆ. ಈಗಾಗಲೇ ಕೆಲ ವರದಿಗಳನ್ನು ಪಡೆದುಕೊಂಡಿದ್ದೇನೆ ಎಂದರು.

ಏನೇನು ಪರಿಹಾರ ಕೊಡಲು ಸಾಧ್ಯವಿದೆಯೋ ಆ ಎಲ್ಲ ಸೂಕ್ತ ಪರಿಹಾರ ಕೊಡುತ್ತೇನೆ. ಸಂತ್ರಸ್ತರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡುತ್ತೇನೆ. ಈ ಭರವಸೆಗಳನ್ನು ಈ ಭಾಗದ ಜನರಿಗೆ ನೀಡಲು ಬಂದಿದ್ದೇನೆ. ಸಾಕಷ್ಟು ಅನಾಹುತ, ಬೆಳೆ ಹಾನಿ ಆಗಿರುವುದು ಗಮನಕ್ಕೆ ಬಂದಿದೆ. ಎಲ್ಲದಕ್ಕೂ ಸೂಕ್ತ ಪರಿಹಾರ ನೀಡಲು ಕ್ರಮ ಜರುಗಿಸುತ್ತೇನೆ‌.

ರೈತಾಪಿ ವರ್ಗ ಆತಂಕಕ್ಕೆ ಒಳಗಾಗುವುದು ಬೇಡ. ಸರ್ಕಾರ ಅವರ ಜೊತೆ ಇದೆ. ನಾಯಕತ್ವ ಬದಲಾವಣೆಯ ಬಗ್ಗೆ ನಾನು ಚರ್ಚೆ ಮಾಡಲು ಇಲ್ಲಿಗೆ ಬಂದಿಲ್ಲ. ಅನಾಹುತಗಳನ್ನು ಪರಿಶೀಲನೆ ನಡೆಸಲು ಬಂದಿದ್ದೇನೆ ಎಂದರು.

ಇದನ್ನೂ ಓದಿ:ಮುರುಡೇಶ್ವರದ ಯುವತಿ ಅತ್ಯಾಚಾರ-ಕೊಲೆ ಪ್ರಕರಣ: ಮರು ತನಿಖೆಗೆ ಆದೇಶ

ABOUT THE AUTHOR

...view details