ಅಥಣಿ/ಬೆಳಗಾವಿ:ಉಪ ಚುನಾವಣೆಯಿಂದ ರಂಗು ಪಡೆದಿರುವ ಅಥಣಿ ಕ್ಷೇತ್ರದಲ್ಲಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿರುಸಿನ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಯಡಿಯೂರಪ್ಪ, ಮಹಾರಾಷ್ಟ್ರದಲ್ಲಿ ನಮ್ಮ ಬಿಜೆಪಿ ಸರ್ಕಾರದ ರಚನೆ ಆಗಿದೆ. ಈ ಸಂತೋಷವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಎಂದರು.

ಯಡಿಯೂರಪ್ಪ ಅವರ ಬಾಯಿಯಿಂದ ಒಂದು ಮಾತು ಬಂದರೆ ಅದು ಯಾವತ್ತೂ ತಪ್ಪುವುದಿಲ್ಲ. ಮುಂದಿನ ಮೂರುವರೆ ವರ್ಷದವರೆಗೂ ಲಕ್ಷ್ಮಣ ಸವದಿ ಡಿಸಿಎಂ ಆಗಿಯೇ ಮುಂದುವರಿಯುತ್ತಾರೆ. ಈ ಬಗ್ಗೆ ಅಥಣಿ ಕ್ಷೇತ್ರದ ಜನರಿಗೆ ನಾನು ಮಾತು ಕೊಡುತ್ತಿದ್ದೇನೆ. ಇನ್ಮುಂದೆಯೂ ಸವದಿಯವರು ಡಿಸಿಎಂ ಆಗಿ ಮುಂದುವರಿಯುತ್ತಾರೆ ಎಂದರು.
ಮಹೇಶ್ ಕುಮಟಳ್ಳಿ ಹಾಗೂ ಲಕ್ಷ್ಮಣ್ ಸವದಿ ಜೊತೆಯಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಆಯ್ಕೆ ಮಾಡಿದರೆ ಅವರು ಸಚಿವರಾಗಲಿದ್ದಾರೆ. ಮಹೇಶ್ ಕುಮಟಳ್ಳಿ ರಾಜೀನಾಮೆ ನೀಡದಿದ್ದರೆ, ನಾನು ಸಿಎಂ ಆಗಲು ಸಾಧ್ಯವಾಗುತ್ತಿರಲಿಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಲು ಆಗುತ್ತಿರಲಿಲ್ಲ. ಇದು ಕುಮಟಳ್ಳಿ ಚುನಾವಣೆ ಅಲ್ಲ, ಇದು ಲಕ್ಷ್ಮಣ್ ಸವದಿ ಚುನಾವಣೆ, ಇದು ಯಡಿಯೂರಪ್ಪ ಚುನಾವಣೆ ಎಂದು ಯಡಿಯೂರಪ್ಪ ತಿಳಿಸಿದರು.
ಶಿವಾಜಿನಗರವೂ ಸೇರಿದಂತೆ ರಾಜ್ಯದ 15ರಲ್ಲಿ 15 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ಚುನಾವಣೆ ಫಲಿತಾಂಶದ ಮೂಲಕ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ಸಿಗಲಿದೆ ಎಂದರು.