ಬೆಳಗಾವಿ:ಕಿತ್ತೂರು ಉತ್ಸವದ ಬೆಳ್ಳಿ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. 25 ವರ್ಷಗಳಲ್ಲಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡ್ತಿರುವ ಎರಡನೇ ಮುಖ್ಯಮಂತ್ರಿ ಎಂಬ ಕೀರ್ತಿಗೂ ಬಸವರಾಜ ಬೊಮ್ಮಾಯಿ ಪಾತ್ರರಾದರು.
1997ರಲ್ಲಿ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದಾಗ ಅಂದಿನ ಸಿಎಂ ಜೆ.ಎಚ್.ಪಟೇಲ್ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ದರು. ಇದಾದ ಬಳಿಕ ಯಾವೊಬ್ಬ ಸಿಎಂ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲು ಬಂದಿರಲಿಲ್ಲ. ಕಿತ್ತೂರು ಉತ್ಸವಕ್ಕೆ ಬಂದರೆ ಸಿಎಂ ಅಧಿಕಾರ ಹೋಗುತ್ತದೆ ಎಂಬ ಅಪನಂಬಿಕೆ ಇದೆ. ಆದರೆ, ಇಂದು ಕಿತ್ತೂರು ಉತ್ಸವದಲ್ಲಿ ಭಾಗಿಯಾಗಿ ಈ ಅಪನಂಬಿಕೆಗೆ ಸಿಎಂ ಬ್ರೇಕ್ ಹಾಕಿದರು.
2012ರಲ್ಲಿ ಕಿತ್ತೂರು ಉತ್ಸವ ಸಮಾರೋಪ ಸಮಾರಂಭದಲ್ಲಿ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು. ಈ ಹಿಂದೆ ಸಿಎಂ ಆಗಿದ್ದ ವೇಳೆ ಕಿತ್ತೂರು ಉತ್ಸವಕ್ಕೆ ಬಿಎಸ್‌ವೈ ಬಂದರೂ ಹೆದ್ದಾರಿ ಬದಿಯ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರಳಿದ್ದರು. ಆದರೆ, ಸಂಜೆ ನಡೆಯುವ ಉತ್ಸವಕ್ಕೆ ಬಾರದೇ ಅಂದಿನ ಸಿಎಂ ಬಿಎಸ್‌ವೈ ತೆರಳಿದ್ದರು.