ಕರ್ನಾಟಕ

karnataka

ETV Bharat / state

ಯಾವುದೇ ವಿಷಯ ಚರ್ಚೆಯಾದ್ರೂ ಪರಿಹಾರಕ್ಕೆ ಸರ್ಕಾರ ಸ್ಪಂದಿಸಲಿದೆ : ಸಿಎಂ

ಕೆಲವರು ಧರಣಿ ಮಾಡ್ತಾರೆ ಎಲ್ಲರಿಗೂ ಭೇಟಿಯಾಗಿ ಸಮಸ್ಯೆ ಬಗೆ ಹರಿಸುತ್ತೇವೆ. ಯಾವುದೇ ವಿಷಯ ಚರ್ಚೆಯಾದ್ರೂ ಪರಿಹಾರದ ರೂಪದಲ್ಲಿ ಏನೆಲ್ಲಾ ಮಾಡಬೇಕೋ ಅದಕ್ಕೆ ಸರ್ಕಾರ ಸ್ಪಂದಿಸಲಿದೆ..

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

By

Published : Dec 12, 2021, 3:56 PM IST

ಬೆಳಗಾವಿ :ಪ್ರತಿವರ್ಷ ಅಧಿವೇಶನ ನಡೆಯುವಾಗ ಹಲವಾರು ಸಮಸ್ಯೆಗಳನ್ನು ತೆಗೆದುಕೊಂಡು ಜ‌ನರು ಬರ್ತಾರೆ. ಅದರಲ್ಲಿ ಕೆಲವರು ಧರಣಿ ಮಾಡ್ತಾರೆ. ಎಲ್ಲರಿಗೂ ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಅಧಿವೇಶನದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿರುವುದು..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಅದೇನಾದ್ರೂ ಆಗಲಿ, ನಾನು ಬೆಳಗ್ಗೆ ಏನು ಹೇಳಿದ್ದೇನೆ?. ಅದಷ್ಟೇ.. ಹೆಚ್ಚಿಗೆ ಹೇಳೋದಿಲ್ಲ ಎಂದರು.

ಸುವರ್ಣಸೌಧಕ್ಕೆ ರೈತರು ಮುತ್ತಿಗೆ ಹಾಕುವ ವಿಚಾರಕ್ಕೆ, ಎಲ್ಲವೂ ಕೂಡ ಪ್ರತಿ ವರ್ಷ ಅಧಿವೇಶನ ನಡೆಯುವಾಗ ಹಲವಾರು ಸಮಸ್ಯೆ ತೆಗೆದುಕೊಂಡು ಜ‌ನ ಬರ್ತಾರೆ.

ಕೆಲವರು ಧರಣಿ ಮಾಡ್ತಾರೆ ಎಲ್ಲರಿಗೂ ಭೇಟಿಯಾಗಿ ಸಮಸ್ಯೆ ಬಗೆ ಹರಿಸುತ್ತೇವೆ. ಯಾವುದೇ ವಿಷಯ ಚರ್ಚೆಯಾದ್ರೂ ಪರಿಹಾರದ ರೂಪದಲ್ಲಿ ಏನೆಲ್ಲಾ ಮಾಡಬೇಕೋ ಅದಕ್ಕೆ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ : ನಾಳೆಯಿಂದ ಕುಂದಾನಗರಿಯಲ್ಲಿ ಚಳಿಗಾಲ ಅಧಿವೇಶನ: ಪ್ರತಿಪಕ್ಷಗಳ ಸವಾಲು ಎದುರಿಸಲು ಸಿದ್ಧವಾಯ್ತು ಬೊಮ್ಮಾಯಿ ಸರ್ಕಾರ

ABOUT THE AUTHOR

...view details