ಬೆಳಗಾವಿ: ಸುವರ್ಣಸೌಧದಲ್ಲಿ 10 ದಿನಗಳ ಕಾಲ ನಡೆದ ಚಳಿಗಾಲ ಅಧಿವೇಶನ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಿಲ್ಯಾಕ್ಸ್ ಆಗಿದ್ದಾರೆ.
ಅಧಿವೇಶನದ ಬಳಿಕ ಸಿಎಂ ರಿಲ್ಯಾಕ್ಸ್: ಬೆಳಗಾವಿಯಲ್ಲಿ ಪಾನಿಪುರಿ, ಗಿರ್ಮಿಟ್ ಸವಿದ ಬೊಮ್ಮಾಯಿ - ರಿಲ್ಯಾಕ್ಸ್ ಮೂಡ್ನಲ್ಲಿ ಸಿಎಂ ಬೊಮ್ಮಾಯಿ
ಹತ್ತು ದಿನಗಳ ಕಾಲ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ತೆರೆ ಕಂಡಿದೆ. ಇದರಿಂದಾಗಿ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಸಚಿವರು, ಶಾಸಕರ ಜೊತೆ ಪಾನಿಪುರಿ, ಗಿರ್ಮಿಟ್ ಸವಿದರು.
ಬೆಳಗಾವಿಯಲ್ಲಿ ಪಾನಿಪುರಿ, ಗಿರ್ಮಿಟ್ ಸವಿದ ಬೊಮ್ಮಾಯಿ
ನಗರದ ಬಸವೇಶ್ವರ ವೃತ್ತದಲ್ಲಿರುವ ತಿನಿಸು ಕಟ್ಟೆಯಲ್ಲಿ ಸಾಮಾನ್ಯರಂತೆ ಮುಖ್ಯಮಂತ್ರಿಗಳು ಪಾನಿಪುರಿ, ಗಿರ್ಮಿಟ್ ಸೇವಿಸಿದರು. ಬಳಿಕ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿದರು. ಈ ವೇಳೆ ಸಿಎಂ ಬೊಮ್ಮಾಯಿಗೆ ಶಾಸಕ ಅಭಯ ಪಾಟೀಲ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ತೆರೆ: ಮತಾಂತರ, ಬೈರತಿ ವಿಚಾರ ಸೇರಿ 10 ದಿನ ಏನೇನೆಲ್ಲಾ ಆಯ್ತು?