ಅಥಣಿ: ತಾಲೂಕಿನ ಸಂಬರಗಿ ಗ್ರಾಮದಲ್ಲಿ ಕೋವಿಡ್-19 ನಿಯಮ ಉಲ್ಲಂಘನೆಯಾದ ಹಿನ್ನೆಲೆ ಇದನ್ನು ಪ್ರಶ್ನಿಸಿದ್ದಕ್ಕೆ ಜನ ಪೊಲೀಸರ ಮೇಲೆ ತಿರುಗಿ ಬಿದ್ದಿದ್ದಾರೆ.
ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು - ವೀಕೆಂಡ್ ಕರ್ಫ್ಯೂ
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ವಾತಾವರಣ ತಿಳಿಗೊಳಿಸಿದ್ದಾರೆ..
police
ಸಂಬರಗಿ ಗ್ರಾಮದಲ್ಲಿ ಕಿರಾಣಿ ಅಂಗಡಿಯನ್ನು ತೆರೆಯಲಾಗಿತ್ತು. ಇದನ್ನು ಅಥಣಿ ಪೊಲೀಸ್ ಸಿಬ್ಬಂದಿ ಯಾಕೆ ಅಂಗಡಿ ಬಾಗಿಲು ತೆರೆದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಆಗ ಸಂಬರಗಿ ಗ್ರಾಮಸ್ಥರು ಸಾಮಾಜಿಕ ಅಂತರ ಮರೆತು ಆರಕ್ಷಕರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ವಾತಾವರಣ ತಿಳಿಗೊಳಿಸಿದ್ದಾರೆ.
Last Updated : Apr 25, 2021, 10:47 PM IST