ಕರ್ನಾಟಕ

karnataka

ETV Bharat / state

ಕೊರೊನಾ ರೋಗಿಗಳು-ಡಾಕ್ಟರ್ಸ್​ ಮಧ್ಯೆ ವಾಗ್ವಾದ: ವೈದ್ಯೆಗೆ ಅವಾಚ್ಯ ಪದಗಳಿಂದ‌ ನಿಂದಿಸಿದ ಸೋಂಕಿತೆ - ಬೆಳಗಾವಿ ಕೊರೊನಾ ಲೇಟೆಸ್ಟ್​ ನ್ಯೂಸ್​

ಕೊರೊನಾ ವರದಿ ವಿಳಂಬ ವಿಚಾರವಾಗಿ ಕೊರೊನಾ ಸೋಂಕಿತರು ಹಾಗೂ ವೈದ್ಯರ ಮಧ್ಯೆ ವಾಗ್ವಾದ ನಡೆದಿದೆ. ಸೋಂಕಿತೆಯೊಬ್ಬಳು ವೈದ್ಯೆಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ‌ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ನಡೆದಿದೆ.

Clash between corona patients and doctors in Belagavi bims hospital
ಕೊರೊನಾ ಸೋಂಕಿತರು-ವೈದ್ಯರ ಮಧ್ಯೆ ವಾಗ್ವಾದ: ವೈದ್ಯೆಗೆ ಅವಾಚ್ಯ ಶಬ್ಧಗಳಿಂದ‌ ನಿಂಧಿಸಿದ ಸೋಂಕಿತೆ

By

Published : Jun 12, 2020, 4:00 PM IST

ಬೆಳಗಾವಿ:ವರದಿ ವಿಳಂಬ ವಿಚಾರವಾಗಿ ಕೊರೊನಾ ಸೋಂಕಿತರು ಹಾಗೂ ವೈದ್ಯರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಸೋಂಕಿತೆಯೊಬ್ಬಳು ವೈದ್ಯೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ‌ನಗರದ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ನಡೆದಿದೆ.

ಕೊರೊನಾ ಸೋಂಕಿತರು- ವೈದ್ಯರ ಮಧ್ಯೆ ವಾಗ್ವಾದ: ವೈದ್ಯೆಗೆ ಅವಾಚ್ಯ ಶಬ್ಧಗಳಿಂದ‌ ನಿಂಧಿಸಿದ ಸೋಂಕಿತೆ

ಏಳು ದಿನ ಕಳೆದರೂ ಇನ್ನೂ ಎರಡನೇ ರಿಪೋರ್ಟ್ ಬಂದಿಲ್ಲ. ನಮಗೆ ಚಿಕಿತ್ಸೆ ನೀಡಲು ವೈದ್ಯಕೀಯ ವಿದ್ಯಾರ್ಥಿಗಳು ಮಾತ್ರ ಬರ್ತಿದ್ದಾರೆ. ವೈದ್ಯರೇಕೆ ಬರುತ್ತಿಲ್ಲ ಎಂದು ಅವರ ವಿರುದ್ಧ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್​ನಿಂದ ಕೆಳಗೆ ಬಂದು ಸೋಂಕಿತರು ಗಲಾಟೆ ಮಾಡಲಾರಂಭಿಸಿದಾಗ ಅಸಮಾಧಾನಗೊಂಡ ವೈದ್ಯೆ ನಿಮಗೆ ಕೊರೊನಾ ಚಿಕಿತ್ಸೆ ಮಾತ್ರವಲ್ಲ, ಮನೋ ವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಇದೆ ಎಂದು ರೇಗಿದರು. ಇದರಿಂದ ಕೋಪಗೊಂಡ ಸೋಂಕಿತೆ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯೂ ನಡೆಯಿತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಮ್ಸ್ ಆಸ್ಪತ್ರೆ ನಿರ್ದೇಶಕ ವಿನಯ್ ದಾಸ್ತಿಕೊಪ್ಪ ಅವರೊಂದಿಗೂ ಕೊರೊನಾ ಸೋಂಕಿತರು ತೀವ್ರ ವಾಗ್ವಾದ ನಡೆಸಿದರು. ಸೋಂಕಿತರಿಗೆ ತಿಳಿ ಹೇಳುವಷ್ಟರಲ್ಲಿ ಬಿಮ್ಸ್ ನಿರ್ದೇಶಕ ಹೈರಾಣಾದರು.

ABOUT THE AUTHOR

...view details