ಬೆಳಗಾವಿ: ಡೆಂಘೀ ಜ್ವರಕ್ಕೆ ತುತ್ತಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಪೌರ ಕಾರ್ಮಿಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಡೆಂಘೀ ಜ್ವರಕ್ಕೆ ಪೌರ ಕಾರ್ಮಿಕ ಸಾವು - Civilian labor
ಬೆಳಗಾವಿಯ ವಂಟಮೂರಿ ಕಾಲೋನಿ ನಿವಾಸಿ ಅನಿಲ್ ಕಾಂಬಳೆ ಎಂಬುವರು ಡೆಂಘೀ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಡೆಂಗ್ಯೂ ಜ್ವರಕ್ಕೆ ಪೌರ ಕಾರ್ಮಿಕ ಸಾವು
ಬೆಳಗಾವಿಯ ವಂಟಮೂರಿ ಕಾಲೋನಿ ನಿವಾಸಿ ಅನಿಲ್ ಕಾಂಬಳೆ (28) ಮೃತ ದುರ್ದೈವಿ. ಗುತ್ತಿಗೆ ಆಧಾರದ ಮೇಲೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಪಾಲಿಕೆ ಕಳೆದ 4 ತಿಂಗಳಿಂದ ಸಂಬಳ ನೀಡಿಲ್ಲ. ಸೂಕ್ತ ಚಿಕಿತ್ಸೆಗೆ ಹಣವಿಲ್ಲದೇ ಅನಿಲ್ ಮೃತಪಟ್ಟಿದ್ದಾನೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ.
ಸಂಬಳ ನೀಡದ ಕಸವಿಲೇವಾರಿ ಗುತ್ತಿಗೆದಾರರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated : Sep 16, 2019, 10:12 AM IST