ಚಿಕ್ಕೋಡಿ:ಭಾರತ ಯಾವುದೇ ವರ್ಗಕ್ಕೆ ಸಿಮೀತವಲ್ಲ. ನಾವು ಹುಟ್ಟೋದು ಇಲ್ಲೇ, ಸಾಯೋದು ಇಲ್ಲೇ. ಈ ಪೌರತ್ವ ಕಾಯ್ದೆಯಿಂದ ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆಯಾಗುವುದಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಂಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ಪಟ್ಟಣದ ಕೇಶವ ಕಾಲಭವನದಲ್ಲಿ ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಕುಟುಂಬದಲ್ಲಿ ನಾಲ್ಕು ಜನ ವಾಸಿಸುವಾಗ ಗೊತ್ತಿಲ್ಲದೇ ಇರೋರು 3 ಜನ ಬಂದು ನಮ್ಮ ಮನೆಯಲ್ಲಿ ವಾಸವಿದ್ರೆ ಅವರನ್ನು ನಿಭಾಯಿಸೋದು ಹೇಗೆ ನೀವೇ ಯೋಚ್ನೆ ಮಾಡಿ. ಹಾಗಿದ್ದಾಗ ನಮ್ಮ ದೇಶವನ್ನು ಮುನ್ನಡೆಸುವ ಪ್ರಧಾನಿ ಅಥವಾ ಸರ್ಕಾರಕ್ಕೆ ನುಸುಳುಕೋರರಾಗಿ ಬಂದು ಭಾರತದಲ್ಲಿ ವಾಸಿಸುವವರನ್ನು ಪೋಷಿಸುವುದು ಎಷ್ಟು ಕಷ್ಟ ಎಂದರು.