ಕರ್ನಾಟಕ

karnataka

ETV Bharat / state

ಪ್ರಧಾನಿಗೆ ಅಭಿನಂದನೆ‌ ಸಲ್ಲಿಸಿದ  ಚಿನ್ಮಯಸಾಗರ ಮುನಿ ಮಹಾರಾಜರು - ಬೆಳಗಾವಿ

ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮಿತ್​ ಶಾ ಜಮ್ಮು-ಕಾಶ್ಮೀರ ರಾಜ್ಯದಲ್ಲಿ 370, 35ಎ, ಈ ಎರಡು ಆರ್ಟಿಕಲ್‍ಗಳನ್ನು ತೆಗೆದುಹಾಕಿದ್ದರಿಂದ ಅಖಂಡ ಭಾರತ ದೇಶ ಈಗ ನಿರ್ಮಾಣವಾಗಿದೆ ಎಂದು ಚಿನ್ಮಯಸಾಗರ ಮುನಿ ಮಹಾರಾಜರು ಹೇಳಿದ್ದಾರೆ.

ಚಿನ್ಮಯಸಾಗರ ಮುನಿ ಮಹಾರಾಜ

By

Published : Aug 6, 2019, 7:53 PM IST

ಚಿಕ್ಕೋಡಿ: 70 ವರ್ಷದ ನನೆಗುದಿಗೆ ಬಿದಿದ್ದ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದರಿಂದ ದೇಶದ ಜನತೆ ಕನಸು ನನಸಾಗಿದೆ ಎಂದು ರಾಷ್ಟ್ರಸಂತ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಆದಿನಾಥ ಜೈನ ಮಂದಿರದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮಿತ್​ ಶಾ ಜಮ್ಮು-ಕಾಶ್ಮೀರದಲ್ಲಿ ಇದ್ದ ಸಂವಿಧಾನದ ಆರ್ಟಿಕಲ್​ 370, 35ಎ ತೆಗೆದುಹಾಕಿದ್ದರಿಂದ ಅಖಂಡ ಭಾರತ ದೇಶ ಈಗ ನಿರ್ಮಾಣವಾಗಿದೆ. ಅವರ ಧೈರ್ಯ ಮತ್ತು ದೇಶಭಕ್ತಿ ಭಾರತ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಗುಣಗಾನ ಮಾಡಿದ್ದಾರೆ.

ಚಿನ್ಮಯಸಾಗರ ಮುನಿ ಮಹಾರಾಜ

ABOUT THE AUTHOR

...view details