ಕರ್ನಾಟಕ

karnataka

ETV Bharat / state

ಬೆಳಗಾವಿ: ತಾಯಿ ಅಂತ್ಯಕ್ರಿಯೆಗೆ ದುಡ್ಡಿಲ್ಲದೆ 3 ದಿನ ಕಾದು ಕುಳಿತ ಮಕ್ಕಳು! - Children wait for the funeral of mother in Belagavi

ಕೊರೊನಾ ವೈರಸ್ ತಡೆಗೆ ಸರ್ಕಾರ ಕೈಗೊಂಡ ಲಾಕ್​ಡೌನ್​ನಿಂದಾಗಿ ಮಕ್ಕಳಿಬ್ಬರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದರು. ಇದರಿಂದ ಹಣವಿಲ್ಲದೆ, ಕಳೆದ‌ ಮೂರು‌ ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ತಾಯಿ ಅಂತ್ಯಕ್ರಿಯೆಗೆ ದುಡ್ಡಿಲ್ಲದೆ ಮಕ್ಕಳು ಕಾದು ಕುಳಿತಿದ್ದರು.

ತಾಯಿಯ ಅಂತ್ಯಕ್ರಿಯೆಗೆ ದುಡ್ಡಿಲ್ಲದೇ ಅಂತ್ಯ ಸಂಸ್ಕಾರಕ್ಕೆ 3 ದಿನ ಕಾಯ್ದು ಕುಳಿತ ಮಕ್ಕಳು
ತಾಯಿಯ ಅಂತ್ಯಕ್ರಿಯೆಗೆ ದುಡ್ಡಿಲ್ಲದೇ ಅಂತ್ಯ ಸಂಸ್ಕಾರಕ್ಕೆ 3 ದಿನ ಕಾಯ್ದು ಕುಳಿತ ಮಕ್ಕಳು

By

Published : Oct 19, 2020, 3:42 PM IST

Updated : Oct 19, 2020, 4:43 PM IST

ಬೆಳಗಾವಿ:ಕಳೆದ‌ ಮೂರು‌ ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ತಾಯಿ ಅಂತ್ಯಕ್ರಿಯೆಗೆ ದುಡ್ಡಿಲ್ಲದ ಪರಿಣಾಮ ತಾಯಿಯ ಅಂತ್ಯಕ್ರಿಯೆಗಾಗಿ ಮಕ್ಕಳು ಮೂರು ದಿನ ಕಾದು ಕುಳಿತ ಮನಕಲಕುವ ಘಟನೆ ಕುಂದಾನಗರಿಯಲ್ಲಿ ಬೆಳಕಿಗೆ ಬಂದಿದೆ.

ತಾಯಿಯ ಅಂತ್ಯಕ್ರಿಯೆಗೆ ದುಡ್ಡಿಲ್ಲದೇ ಅಂತ್ಯ ಸಂಸ್ಕಾರಕ್ಕೆ 3 ದಿನ ಕಾದು ಕುಳಿತ ಮಕ್ಕಳು

ಕಳೆದ ಮೂರು ದಿನಗಳ‌ ಹಿಂದೆ (ಅ.16) ತಾಲೂಕಿನ ಗಣೇಶಪುರ ಗ್ರಾಮದ ನಿವಾಸಿ ಭಾರತಿ ಬಸ್ತವಾಡಕರ್ (50) ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಮೃತ ಭಾರತಿ ಅವರ ಇಬ್ಬರು ಗಂಡು ಮಕ್ಕಳು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಕೊರೊನಾ ವೈರಸ್ ತಡೆಗೆ ಸರ್ಕಾರ ಕೈಗೊಂಡ ಲಾಕ್​ಡೌನ್​ನಿಂದಾಗಿ ಮಕ್ಕಳಿಬ್ಬರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದರು. ಹೀಗಾಗಿ ಇಬ್ಬರ ಕೈಯಲ್ಲಿ ತಾಯಿಯ ಅಂತ್ಯಕ್ರಿಯೆ ಮಾಡಿಸಲು ಹಣವಿರಲಿಲ್ಲ. ಹೀಗಾಗಿ ಮೂರು ದಿನ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲೇ ತಾಯಿಯ ಮೃತದೇಹ ಇಟ್ಟುಕೊಂಡು ಕುಳಿತಿದ್ದರು.

ಮೃತ ತಾಯಿಯ ಅಂತ್ಯಕ್ರಿಯೆಗೂ ದುಡ್ಡು ಇಲ್ಲದೆ ಪರದಾಡುತ್ತಿದ್ದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಹೆಲ್ಪ್ ಫಾರ್ ನೀಡೀ ಸಂಸ್ಥೆ ಸದಸ್ಯರು, ಭಾರತಿ ಅವರ ಅಂತ್ಯಕ್ರಿಯೆಯನ್ನು ಸದಾಶಿವನಗರದಲ್ಲಿ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

Last Updated : Oct 19, 2020, 4:43 PM IST

For All Latest Updates

TAGGED:

ABOUT THE AUTHOR

...view details