ಕರ್ನಾಟಕ

karnataka

ETV Bharat / state

ಚಿಕ್ಕೋಡಿಯಲ್ಲಿ 20 ರೂಪಾಯಿಗಾಗಿ ಬಾಲಕಿಯನ್ನು ಬಾವಿಗೆ ತಳ್ಳಿ ಕೊಲೆ! - ಚಿಕ್ಕೋಡಿ ಲೆಟೆಸ್ಟ್​ ಕ್ರೈಂ ನ್ಯೂಸ್​

ಪೂಜಾ ದತ್ತರಾವ್ ಕಾಂಬಳೆ ಎಂಬ ಮಹಿಳೆ 20 ರೂಪಾಯಿ ಆಸೆಗಾಗಿ ದಿವ್ಯಾ ವಿನೋದ ಉಗಡೆ ಎನ್ನುವ 4 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

child murdered
20 ರೂ.ಆಸೆಗಾಗಿ 4 ವರ್ಷದ ಪುಟ್ಟ ಬಾಲಕಿಯನ್ನು ಬಾವಿಗೆ ತಳ್ಳಿ ಕೊಲೆ

By

Published : May 13, 2020, 11:17 PM IST

ಚಿಕ್ಕೋಡಿ: ಕೇವಲ 20 ರೂಪಾಯಿ ಆಸೆಗಾಗಿ 4 ವರ್ಷದ ಪುಟ್ಟ ಬಾಲಕಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಜಾಗನೂರ ಗ್ರಾಮದ ದಿವ್ಯಾ ವಿನೋದ ಉಗಡೆ (4) ಕೊಲೆಯಾದ ಬಾಲಕಿ. ಪೂಜಾ ದತ್ತರಾವ್ ಕಾಂಬಳೆ(25) ಕೊಲೆ ಮಾಡಿದ ಮಹಿಳೆ. ರಾಮಪ್ಪಾ ಕಳ್ಳೆಪ್ಪಾ ಖಾನಾಪುರೆ ಎಂಬುವರ ಟ್ರ್ಯಾಕ್ಟರ್​​ ಮೇಲೆ ಮಹಾರಾಷ್ಟ್ರದ ವಾಸಿಮ ಜಿಲ್ಲೆಯ ಗ್ಯಾಂಗಿನವರು ಕಬ್ಬು ಕಟಾವ್ ಮಾಡುವ ಸಲುವಾಗಿ ಕಳೆದ ಏಳು ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು. ಕಬ್ಬು ಕಟಾವು ಮಾಡಿ ತಮ್ಮ ಊರಿಗೆ ಹೋಗುವಷ್ಟರಲ್ಲಿ ಲಾಕಡೌನ್ ಆದ ಕಾರಣ ಇಲ್ಲೇ ಉಳಿದಕೊಂಡ್ಡಿದ್ದರು. ಅದೇ ಗುಂಪಿನಲ್ಲಿ ಕೆಲಸ ಮಾಡುವ ಪೂಜಾ ದತ್ತರಾವ್ ಕಾಂಬಳೆ ಎಂಬ ಮಹಿಳೆ 20 ರೂಪಾಯಿ ಆಸೆಗಾಗಿ ದಿವ್ಯಾ ವಿನೋದ ಉಗಡೆ ಎನ್ನುವ 4 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಘಟನೆ ಹಿನ್ನಲೆ:ಬಾಲಕಿ ದಿವ್ಯಾಳ ತಾಯಿ 20 ರೂಪಾಯಿ ಕೊಟ್ಟು ಅಂಗಡಿಯಿಂದ ಸಾಮಾನು ತರಲು ಕಳಿಸಿದ್ದಳು. ಬಾಲಕಿಯ ಕೈಯಲ್ಲಿ 20 ರೂಪಾಯಿ ಇರುವುದನ್ನು ನೋಡಿದ ಮಹಿಳೆ ಪೂಜಾ, ಆಕೆಯ ಕೈಯಿಂದ ಹಣ ಕಸಿದುಕೊಂಡಿದ್ದಾಳೆ. ದುಡ್ಡು ಕಸಿದುಕೊಳ್ಳುತ್ತಲೇ ಬಾಲಕಿ ದಿವ್ಯಾ ಅಳಲು ಪ್ರಾರಂಭಿಸಿದ್ದಾಳೆ. ಆಗ ಅತ್ತು ದೊಡ್ಡ ಸುದ್ದಿ ಆದೀತು ಎಂದು ಬಾವಿಗೆ ನೂಕಿದ್ದಾಳೆ. ಈ ಘಟನೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಆರ್.ಆರ್.ಪಾಟೀಲ ಮತ್ತು ಪಿಎಸ್‍ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details