ಕರ್ನಾಟಕ

karnataka

ETV Bharat / state

ಧನದಾಹಕ್ಕೆ ಬಾಲ್ಯ ವಿವಾಹ! ಮುಚ್ಚಳಿಕೆ ಬರೆದುಕೊಟ್ಟರೂ ಹಳೆ ಚಾಳಿ ಬಿಡಲಿಲ್ಲ!

ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟ ಪೋಷಕರ ಧನದಾಹಕ್ಕೆ ಬಾಲಕಿ ಬಲಿಯಾದಳು!

ಬಾಲ್ಯವಿವಾಹ

By

Published : May 30, 2019, 12:04 PM IST

ಚಿಕ್ಕೋಡಿ : ಬಾಲ್ಯವಿವಾಹ ನಿಲ್ಲಿಸಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದ ಕುಟುಂಬವೊಂದು ಅಧಿಕಾರಿಗಳಿಗೆ ತಿಳಿಯದಂತೆ ಅಪ್ರಾಪ್ತ ಬಾಲಕಿಯ ಮದುವೆ ಮಾಡಿದ್ದು, ಈ ವಿಷಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಪರಾರಿಯಾದ ಪ್ರಕರಣ ನಡೆದಿದೆ.

ಕೊಪ್ಪಳ ತಾಲೂಕಿನ ಗ್ರಾಮವೊಂದರ ಅಪ್ರಾಪ್ತೆಯನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಹುಲಗಬಾಳಿ ಗ್ರಾಮದ ಯುವಕನ ಜೊತೆ ವಿವಾಹ ಮಾಡಲು ನಿರ್ಧರಿಸಲಾಗಿತ್ತು. ಅದ್ರೆ ಮದುವೆಗೆ ಸಹಮತ ವ್ಯಕ್ತಪಡಿಸದ ಬಾಲಕಿ ಈ ಕುರಿತಾಗಿ ತನ್ನ ಚಿಕ್ಕಪ್ಪನ ಮುಂದೆ ಅಳಲು ತೋಡಿಕೊಂಡಿದ್ದಳು. ಹುಡುಗಿಯ ಚಿಕ್ಕಪ್ಪ ಮಕ್ಕಳ ಸಹಾಯವಾಣಿಗೆ ಈ ಸಂಬಂಧ ದೂರು ನೀಡಿದ್ದರು.

ಈ ವಿವಾಹ ಕೊಪ್ಪಳದಲ್ಲಿ ನಡೆಯಬೇಕಿತ್ತು. ಅಪ್ರಾಪ್ತೆಯನ್ನು ಮದುವೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಂತೆ ಬಾಲಕಿ ತಂದೆ- ತಾಯಿಯನ್ನು ಕೊಪ್ಪಳ ಕಲ್ಯಾಣ ಸಮಿತಿ ಅಧಿಕಾರಿಗಳು ಕರೆಸಿಕೊಂಡು ಕಾನೂನು ಮತ್ತು ಬಾಲ್ಯ ವಿವಾಹದಿಂದಾಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ತಿಳಿ ಹೇಳಿದ್ದರು. ಇದರಿಂದ ಎಚ್ಚೆತ್ತ ಬಾಲಕಿ ಮನೆಯವರು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರು.

ಆದ್ರೆ, ಪೋಷಕರ ಧನದಾಹ ನಿಲ್ಲಲಿಲ್ಲ. ಪಾಲಕರು ಮೇ 20ಕ್ಕೆ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಒತ್ತಾಯದ ಮೇರೆಗೆ ಬಾಲ್ಯವಿವಾಹ ನೆರವೇರಿಸಿದ್ದಾರೆ. ಈ ಬಗ್ಗೆ ಬೆಳಗಾವಿ ಮಕ್ಕಳ ಕಲ್ಯಾಣ ಸಮಿತಿಗೆ ಕೊಪ್ಪಳ ಮಕ್ಕಳ ಕಲ್ಯಾಣ ಸಮಿತಿ ಮಾಹಿತಿ ನೀಡಿದೆ. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಹುಲಬಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಈ ವೇಳೆ ಕುಟುಂಬಸ್ಥರು ಪರಾರಿಯಾಗಿದ್ದು ಗ್ರಾಮದ ಹಿರಿಯರಿಗೆ ಬಾಲ್ಯವಿವಾಹಕ್ಕೊಳಗಾದ ಯುವತಿಯನ್ನು ಒಪ್ಪಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details