ಕರ್ನಾಟಕ

karnataka

ETV Bharat / state

ಫೋರ್ಜರಿ ಸಹಿ ಮಾಡಿ ಭೂಮಿ ನೋಂದಣಿ ಆರೋಪ.. ಚಿಕ್ಕೋಡಿಯ ಗ್ರೇಡ್-2 ತಹಶೀಲ್ದಾರ್ ಬಂಧನ - Chikodi Tahsildar Arrest news

ಈ ಬಗ್ಗೆ ಮಾರುತಿ ಕರಿಗಾರ ಎಂಬುವರು ನೀಡಿದ ದೂರಿನ ಮೇರೆಗೆ ಅರುಣ್ ಶ್ರೀಖಂಡೆ ಅವರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ..

Chikodi Tahsildar Arrest
ಚಿಕ್ಕೋಡಿಯ ಗ್ರೇಡ್ 2 ತಹಶೀಲ್ದಾರ್ ಅರೆಸ್ಟ್

By

Published : Sep 24, 2021, 8:16 PM IST

Updated : Sep 24, 2021, 8:55 PM IST

ಬೆಳಗಾವಿ :ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ನೋಂದಾಯಿಸಿದ್ದ ಗ್ರೇಡ್-2 ತಹಶೀಲ್ದಾರ್ ಬಂಧನವಾಗಿದೆ.

ಚಿಕ್ಕೋಡಿ‌ ನಗರದಲ್ಲಿರುವ ತಹಶೀಲ್ದಾರ್​ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಡ್-2 ತಹಶೀಲ್ದಾರ್ ಅರುಣ್ ಶ್ರೀಖಂಡೆ ಎಂಬುವರನ್ನು ಪೊಲೀಸರು ಇಂದು ಸಂಜೆ ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಮಾರುತಿ ಕರಿಗಾರ ಎಂಬುವರಿಗೆ ಸೇರಿದ್ದ ರಿ.ನಂ-436/5ಮತ್ತು 436/6ರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಖರೀದಿ ಮಾಡಿದ್ದು, ಫೋರ್ಜರಿ ಸಹಿ ಮಾಡಿ ಭೂಮಿಯನ್ನು ನೋಂದಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಚಿಕ್ಕೋಡಿಯ ಗ್ರೇಡ್-2 ತಹಶೀಲ್ದಾರ್ ಬಂಧನ

ಈ ಬಗ್ಗೆ ಮಾರುತಿ ಕರಿಗಾರ ಎಂಬುವರು ನೀಡಿದ ದೂರಿನ ಮೇರೆಗೆ ಅರುಣ್ ಶ್ರೀಖಂಡೆ ಅವರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ಓದಿ:ಮೊದಲ & ಎರಡನೇ ಡೋಸ್ ಲಸಿಕೆ ಲಭ್ಯ.. ಹಳ್ಳಿ ಹಳ್ಳಿಯಲ್ಲೂ ಕೂಗುತ್ತಾ ಲಸಿಕೀಕರಣ..

Last Updated : Sep 24, 2021, 8:55 PM IST

ABOUT THE AUTHOR

...view details