ಕರ್ನಾಟಕ

karnataka

ETV Bharat / state

ಕಟಾವಿನಲ್ಲಿ ಸಾಧನೆ: 2 ಟ್ರ್ಯಾಕ್ಟರ್​​ಗಳಲ್ಲಿ 53 ಟನ್ ಕಬ್ಬು ಹೇರಿದ ರೈತರು! - ಚಿಕ್ಕೋಡಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ರೈತ ಶುಭಾಸ ಬೊರನ್ನವರ ಎಂಬುವವರು 53 ಟನ್ ಕಬ್ಬನ್ನು ಕೇವಲ ಎರಡು ಟ್ರ್ಯಾಕ್ಟರ್​ಗಳಲ್ಲಿ ಸಾಗಾಣಿಕೆ ಮಾಡಿ ನುರಿಸಲು ಮುಂದಾಗಿದ್ದಾರೆ.

sugarcane
ಒಂದೇ ಬಾರಿ 53 ಟನ್ ಕಬ್ಬು ನುರಿಸಲು ಮುಂದಾದ ರೈತರು

By

Published : Feb 18, 2021, 4:33 PM IST

ಚಿಕ್ಕೋಡಿ: ಕೆಲ ರೈತರು ಸ್ವಲ್ಪ ಜಮೀನಿನಲ್ಲಿ ಹೆಚ್ಚಿನ ಬೆಳೆ ತೆಗೆದು ಇತರ ರೈತರಿಗೆ ಮಾದರಿಯಾಗಿರುವುದನ್ನು ನೋಡಿದ್ದೇವೆ. ಆದರೆ ಈ ರೈತ ಮಾತ್ರ ಕಬ್ಬು ಕಟಾವು ಮಾಡಿ ಒಂದೇ ದಿನದಲ್ಲಿ 53 ಟನ್ ಕಬ್ಬನ್ನು ನುರಿಸಲು ಮುಂದಾಗಿದ್ದಾರೆ.

ಒಂದೇ ಬಾರಿ 53 ಟನ್ ಕಬ್ಬು ನುರಿಸಲು ಮುಂದಾದ ರೈತ

ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ರೈತ ಶುಭಾಸ ಬೊರನ್ನವರ ಎಂಬುವವರು 53 ಟನ್ ಕಬ್ಬನ್ನು ಕೇವಲ ಎರಡು ಟ್ರ್ಯಾಕ್ಟರ್​ ಮೂಲಕ ಸಾಗಾಣಿಕೆ ಮಾಡಿ ಸಾಧನೆ ಮಾಡಲು ಹೊರಟಿದ್ದಾರೆ.

ಇವರಿಗೆ ತಮ್ಮ ಕಬ್ಬಿನ ಗ್ಯಾಂಗಿನಲ್ಲಿರುವ ರೈತರು ಕೂಡ ಸಾಥ್​ ನೀಡಿದ್ದು, ಈ ಟ್ರ್ಯಾಕ್ಟರ್​ಗಳಲ್ಲಿ ಕಬ್ಬು ಭರ್ತಿ ಮಾಡಲು 24 ಗಂಟೆ ಕಾಲಾವಕಾಶ ತೆಗೆದುಕೊಂಡು ಅತಿ ಹೆಚ್ಚು ಕಬ್ಬು ಭರ್ತಿ ಮಾಡಿ ಹುಲಗಬಾಳದಿಂದ 40 ಕಿಲೋ ಮೀಟರ್​ ಅಂತರದಲ್ಲಿರುವ ಕಾಗವಾಡ ತಾಲೂಕಿನ ಉಗಾರ ಸಕ್ಕರೆ ಕಾರ್ಖಾನೆಗೆ ಸಾಗಿಸಿದ್ದಾರೆ.

ABOUT THE AUTHOR

...view details