ಚಿಕ್ಕೋಡಿ :ಜೂನ್ 25ರಂದು ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ಸಕಲ ಸಿದ್ಧತೆ ನಡೆಸ್ತಿದೆ. ಇದರ ಜೊತೆ ಪ್ರೌಢ ಶಾಲಾ ಸಿಬ್ಬಂದಿ ಸಹಿತ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಲು ಸಜ್ಜಾಗುತ್ತಿದ್ದಾರೆ.
SSLC ಪರೀಕ್ಷೆ ವೇಳೆ ಮುನ್ನಚ್ಚರಿಕೆ ಕೈಗೊಳ್ಳೋದ್ಹೇಗೆ ಅನ್ನೋದರ ಕುರಿತು ಪ್ರಾತ್ಯಕ್ಷಿಕೆ.. - ಚಿಕ್ಕೋಡಿ
ಪರೀಕ್ಷೆ ದಿನ ಶಾಲೆ ಕೊಠಡಿ ಪ್ರವೇಶಕ್ಕೂ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಬೇಕು. ಬಳಿಕ ವಿದ್ಯಾರ್ಥಿಗಳು ಕೈಗಳಿಗೆ ಸ್ಯಾನಿಟೈಸರ್ ಹಾಕಿ ತಮ್ಮ ರಿಜಿಸ್ಟರ್ ನಂಬರ್ ಇರುವ ಸ್ಥಳದಲ್ಲಿ ಕುಳಿತಕೊಳ್ಳಬೇಕು.
ಕೊರೊನಾ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಜಿಐ ಬಾಗೇವಾಡಿ ಪ್ರೌಢ ಶಾಲೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಪರೀಕ್ಷೆಗೆ ಹೇಗೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು ಎಂಬುದರ ಬಗ್ಗೆ ತಿಳಿಸಲಾಯಿತು. ಪರೀಕ್ಷೆ ದಿನ ಶಾಲೆ ಕೊಠಡಿ ಪ್ರವೇಶಕ್ಕೂ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಬೇಕು. ಬಳಿಕ ವಿದ್ಯಾರ್ಥಿಗಳು ಕೈಗಳಿಗೆ ಸ್ಯಾನಿಟೈಸರ್ ಹಾಕಿ ತಮ್ಮ ರಿಜಿಸ್ಟರ್ ನಂಬರ್ ಇರುವ ಸ್ಥಳದಲ್ಲಿ ಕುಳಿತಕೊಳ್ಳಬೇಕು.
ಅಲ್ಲದೇ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಗೆ ತೆರಳುವಂತೆ ಪ್ರಾತ್ಯಕ್ಷಿಕೆ ಮೂಲಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.