ಚಿಕ್ಕೋಡಿ(ಬೆಳಗಾವಿ):ಲಾಕ್‍ಡೌನ್ ಹಿನ್ನೆಲೆ ಮನೆಯಿಂದ ಹೊರಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡರೂ ಕೇಳದೆ ಅನಾವಶ್ಯಕವಾಗಿ ಲಾಕ್‍ಡೌನ್ ಉಲ್ಲಂಘಿಸಿದ ಹಿನ್ನೆಲೆ ಚಿಕ್ಕೋಡಿ ಪಟ್ಟಣದಲ್ಲಿ ಎರಡು ದಿನಗಳಲ್ಲಿ 70ಕ್ಕೂ ಹೆಚ್ಚು ದ್ವಿಚಕ್ರ ವಾಹಗಳನ್ನು ಸೀಜ್ ಮಾಡಿದ್ದಾರೆ.
70ಕ್ಕೂ ಹೆಚ್ಚು ಬೈಕ್ ಸೀಜ್ ಮಾಡಿದ ಚಿಕ್ಕೋಡಿ ಪೊಲೀಸರು
ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ತೊಲಗಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಹೇರಲಾಗಿದೆ. ಆದರೂ ಜನ ಮನೆಯಿಂದ ಹೊರ ಬರುವುದನ್ನು ಬಿಟ್ಟಿಲ್ಲ. ಹಾಗಾಗಿ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
70ಕ್ಕೂ ಹೆಚ್ಚು ದ್ವಿಚಕ್ರವಾಹಗಳನ್ನು ಸೀಜ್ ಮಾಡಿದ ಚಿಕ್ಕೋಡಿ ಪೋಲಿಸರು
ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ತೊಲಗಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಹೇರಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಲಾಕ್‍ಡೌನ್ ಪಾಲಿಸಿ ಎಂದು ಪೊಲೀಸರು ಮನವಿ ಮಾಡಿದರೂ ಕೇಳದ ಹಿನ್ನೆಲೆ ಚಿಕ್ಕೋಡಿ ಡಿವೈಎಸ್ಪಿ ಮನೋಜ್ ನಾಯಿಕ್ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿ ಪಟ್ಟಣದಲ್ಲಿ ಓಡಾಡುತ್ತಿದ್ದ ಬೈಕ್ಗಳನ್ನು ಸೀಜ್ ಮಾಡಿದ್ದಾರೆ.