ಚಿಕ್ಕೋಡಿ: ಒಂದು ಹೋರಿ ಸುಮಾರು 5.51 ಲಕ್ಷ ರೂ.ಗೆ ಮಾರಾಟವಾಗುವುದರ ಮೂಲಕ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.
5.51 ಲಕ್ಷ ಬೆಲೆಗ ಮಾರಾಟವಾದ ಹೋರಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಕುರಬ ಗೋಡಿ ಎಂಬ ತೋಟದಲ್ಲಿ ಅಶೋಕ ಶ್ರೀಮಂತ ಕುರಿ ಎಂಬ ರೈತ ಸಾಕಿದ ಕಿಲಾರಿ ಜಾತಿಯ ಹೋರಿ 5.51 ಲಕ್ಷ ರೂ.ಗೆ ಮಾರಾಟವಾಗಿದೆ.
ಹೋರಿಗೆ ಕೇವಲ ಮೂರೂವರೆ ವರ್ಷ ತುಂಬಿದೆ. ಅಶೋಕ ಕುರಿ ಮೂಲತಃ ರೈತ ಕುಟುಂಬದವರು. ಕ್ರಮೇಣ ಸಣ್ಣ ಹೋರಿ ಕರುಗಳನ್ನ ತೆಗೆದುಕೊಂಡು ಬಂದು ಅವುಗಳನ್ನು ಚೆನ್ನಾಗಿ ಪಳಗಿಸಿ ಬೆಳೆಸಿ ರೈತರಿಗೆ ಮಾರುತ್ತಾರೆ. ಸದ್ಯ ಈ ಹೋರಿಯನ್ನು ಕರ್ನಾಟಕ, ಮಹಾರಾಷ್ಟ್ರ ಭಾಗದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಓದಿ:ಎರಡು ಎಕರೆಯಲ್ಲಿ 20 ಅಡಿ ಎತ್ತರದ 240 ಟನ್ ಕಬ್ಬು ಬೆಳೆದ ರೈತರಿಂದ ಹೊಸ ದಾಖಲೆ
ಈ ಹೋರಿಯನ್ನು ಬೆಳಗಾವಿ ಜಿಲ್ಲೆಯ ಪಾಶಾಪೂರ ರೈತ ಬಸಲಿಂಗ ಬಸವಣ್ಣಿ ಅಂಬಲಿ ಎಂಬುವರು ಖರೀದಿಸಿದ್ದಾರೆ.