ಚಿಕ್ಕೋಡಿ: ಪಟ್ಟಣದಲ್ಲಿ 2 ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆ ಪ್ರತಿ ಮನೆ ಮನೆಗೂ ತೆರಳಿ ಅಧಿಕಾರಿಗಳು ಸ್ಕ್ರೀನಿಂಗ್ ನಡೆಸಿದರು.
ಚಿಕ್ಕೋಡಿಯಲ್ಲಿ 2 ಕೊರೊನಾ ಪಾಸಿಟಿವ್.. ಒಂದೂ ಮನೆ ಬಿಡದೆ ಟೆಸ್ಟಿಂಗ್ - ಚಿಕ್ಕೋಡಿ
ಪ್ರತಿ ಮನೆ ಮನೆಗೆ ತೆರಳಿ ವಯಸ್ಕರು, ಮಕ್ಕಳನ್ನೂ ಸಹ ಬಿಡದೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ಸ್ಕ್ರೀನಿಂಗ್.
ಸ್ಕ್ರೀನಿಂಗ್ ನಡೆಸಿದ ಅಧಿಕಾರಿಗಳು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಝಾರಿ ಗಲ್ಲಿಯ ಪ್ರತಿ ಮನೆ ಮನೆಗೆ ತೆರಳಿ ವಯಸ್ಕರು, ಮಕ್ಕಳನ್ನೂ ಸಹ ಬಿಡದೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ಸ್ಕ್ರೀನಿಂಗ್ ನಡೆಸಲಾಯಿತು.
ಇನ್ನು ಇವರ ಕೆಲಸಕ್ಕೆ ಆರೋಗ್ಯ ಇಲಾಖೆ ಮತ್ತು ಪುರಸಭೆ ಸಿಬ್ಬಂದಿ ಸಾಥ್ ನೀಡಿದ್ದಾರೆ.