ಚಿಕ್ಕೋಡಿ:ಕಳೆದ ವರ್ಷದ ಪ್ರವಾಹ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಪ್ರವಾಹ ಬರುವ ಮುನ್ಸೂಚನೆ ಇದೆ. ನಮಗೆ ಪರಿಹಾರ ನೀಡಿ ಎಂದು ಸಂತ್ರಸ್ತರು ವಾರದ ಹಿಂದೆ ಪ್ರತಿಭಟನೆ ಮಾಡುವಾಗ ರಾಯಬಾಗ ತಹಶೀಲ್ದಾರ ಎನ್.ಬಿ.ಗೆಜ್ಜಿ, ನಿಮಗೆ ಪರಿಹಾರ ಕೊಡುತ್ತೇವೆ ಎಂದು ಹೇಳಿ ಮರಳಿ ಮನೆಗೆ ಕಳುಹಿಸಿದ್ದರು. ಆದರೆ ಈವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ.
ಪರಿಹಾರ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ ನೆರೆ ಸಂತ್ತಸ್ತರು - ವಿಷ ಸೇವಿಸಲು ಮುಂದಾದ ನೆರೆ ಸಂತ್ತಸ್ಥರು
ಇಂದು ಮಧ್ಯರಾತ್ರಿ 12 ಗಂಟೆ ಒಳಗೆ ನಮಗೆ ನೆರೆ ಪರಿಹಾರ ನಿಡಿದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನೆರೆ ಸಂಸತ್ರಸ್ತರು ಎಚ್ಚರಿಕೆ ನೀಡಿದ್ದಾರೆ.
ಪರಿಹಾರ ಸಿಗದಿದ್ದಕ್ಕೆ ವಿಷ ಸೇವಿಸಲು ಮುಂದಾದ ನೆರೆ ಸಂತ್ತಸ್ಥರು
ಒಂದು ವಾರದಿಂದ ಪ್ರವಾಹ ಪರಿಹಾರ ಸರ್ವೆಗೆ ರಾಯಬಾಗ ತಾಲೂಕಿನ ಬೀರಡಿ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿಯೂ ಬಂದಿಲ್ಲ. ತಹಶೀಲ್ದಾರ್ ಕಚೇರಿ ಮುಂದೆ 15 ಕುಟುಂಬಗಳ ಸದಸ್ಯರು ಬೆಳಿಗ್ಗೆಯಿಂದ ರಾತ್ರಿವರೆಗೆ ಪ್ರತಿಭಟನೆ ಮಾಡಿದರೂ ಸ್ಥಳಕ್ಕೆ ಸ್ಥಳೀಯ ಶಾಸಕರು, ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 12 ಗಂಟೆ ಒಳಗೆ ನಮಗೆ ಪರಿಹಾರ ಒದಗಿಸದಿದ್ದರೆ ವಿಷ ಸೇವಿಸುವುದಾಗಿ ಪರಿಹಾರ ವಂಚಿತರು ಎಚ್ಚರಿಕೆ ನೀಡಿದ್ದಾರೆ.