ಕರ್ನಾಟಕ

karnataka

ETV Bharat / state

ಸಿಎಂ ಎದುರೇ ಚಿಕ್ಕೋಡಿ ‌ಜಿಲ್ಲಾ ಹೋರಾಟ ಸಮಿತಿಯಿಂದ ಡಿಸಿಎಂ‌ ಸವದಿಗೆ ತರಾಟೆ! - ವಾಗ್ವಾದ

ಮುಖ್ಯಮಂತ್ರಿ ಉಪಸ್ಥಿತಿಯಲ್ಲೇ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಚಿಕ್ಕೋಡಿ ‌ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ತರಾಟೆ ತೆಗೆದುಕೊಂಡ ಘಟನೆ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.

ಚಿಕ್ಕೋಡಿ ‌ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳಿಂದ ಡಿಸಿಎಂ‌ ಸವದಿಗೆ ತರಾಟೆ

By

Published : Oct 3, 2019, 9:42 PM IST

ಬೆಳಗಾವಿ: ಮುಖ್ಯಮಂತ್ರಿ ಉಪಸ್ಥಿತಿಯಲ್ಲೇ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಚಿಕ್ಕೋಡಿ ‌ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ತರಾಟೆ ತೆಗೆದುಕೊಂಡ ಘಟನೆ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.

ಅಖಂಡ ‌ಬೆಳಗಾವಿ ವಿಭಜಿಸಿ ಚಿಕ್ಕೋಡಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಬಿ.ಆರ್.ಸಂಗಪ್ಪಗೋಳ ನೇತೃತ್ವದ ನಿಯೋಗ ಸಿಎಂಗೆ ಮನವಿ ಸಲ್ಲಿಸಲು ಆಗಮಿಸಿತ್ತು. ಮನವಿ ಸಲ್ಲಿಸಿ ಜಿಲ್ಲಾ ವಿಭಜನೆಯ ಅಗತ್ಯತೆ ಬಗ್ಗೆ ಹೋರಾಟಗಾರರು ಸಿಎಂಗೆ ಮನವಿ ಮಾಡಿಕೊಡುತ್ತಿದ್ದರು.‌ ಈ ವೇಳೆ ಡಿಸಿಎಂ ಮಧ್ಯಪ್ರವೇಶಿಸಲು ಯತ್ನಿಸಿದಾಗ ಹೋರಾಟಗಾರರು ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಯಡಿಯೂರಪ್ಪ ಉಪಸ್ಥಿತಿಯಲ್ಲೇ ಡಿಸಿಎಂ‌ ಸವದಿಗೆ ತರಾಟೆ

ಇದೇ ಭಾಗದವರಾಗಿ ಇಷ್ಟು ದಿನ ಎಲ್ಲಿಗೆ ಹೋಗಿದ್ರಿ ಎಂದು ಡಿಸಿಎಂರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ವಿಭಜನೆ ಕುರಿತು ನೋಡೋಣ ಎಂದು ಸಿಎಂ ಭರವಸೆ ನೀಡಿದರು. ಎಷ್ಟು ದಿನ ಅಂತ ಕಾಯೋದು, ಯಾವಾಗ ಜಿಲ್ಲೆ ಮಾಡ್ತಿರಾ ಹೇಳಿ ಎಂದು ಸಂಗಪ್ಪಗೋಳ ಸಿಎಂ ವಿರುದ್ಧವೂ ಗರಂ ಆದರು‌.

ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಂಗಪ್ಪಗೋಳ ನಡುವೆ ವಾಗ್ವಾದ ನಡೆಯುತ್ತಿದ್ದಂತೆ ಸಿಎಂ ಅಲ್ಲಿಂದ ಹೊರಟರು. ಇದಕ್ಕೂ ಮೊದಲು ಸಾಂಬ್ರಾ ‌ವಿಮಾನ ನಿಲ್ದಾಣದಲ್ಲಿ ಗೋಕಾಕಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ‌ಸಿಎಂಗೆ ಮನವಿ ಸಲ್ಲಿಸಲಾಯಿತು. ಸದ್ಯ ಬೆಳಗಾವಿ ಜಿಲ್ಲೆಯ ವಿಭಜನೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ.‌ ವಿಭಜನೆಯ ಅನಿವಾರ್ಯತೆ ಬಂದ್ರೆ ತಮ್ಮೆಲ್ಲರ ಅಭಿಪ್ರಾಯ ಪಡೆಯುವುದಾಗಿ ಸಿಎಂ ಭರವಸೆ ನೀಡಿದ್ದರು.

ABOUT THE AUTHOR

...view details