ಕರ್ನಾಟಕ

karnataka

ETV Bharat / state

ಆಳುವವರೆ ಹೀಗೆ ಮಾಡಿದ್ರೆ ಹೇಗೆ?... ಸೀಟ್​ ಬೆಲ್ಟ್​ ಹಾಕದೆ ಕಾನೂನು ಉಲ್ಲಂಘಿಸಿದ ಸಿಎಂ, ಡಿಸಿಎಂ

ಸಿಎಂ ಬಿ.ಎಸ್​ ಯಡಿಯೂರಪ್ಪ ಮತ್ತು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ್​ ಸವದಿ ಅವರು ಕಾರಿನಲ್ಲಿ ಸೀಟ್​ ಬೆಲ್ಟ್ ಧರಿಸದೇ ಪ್ರಯಾಣ ಬೆಳಸಿ ಮೋಟಾರು ವಾಹನ ಕಾಯ್ದೆ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ.

ಸಿಎಂ-ಡಿಸಿಎಂ

By

Published : Oct 5, 2019, 11:38 AM IST

ಅಥಣಿ :ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಸಾರ್ವಜನಿಕವಾಗಿಯೇ ಮೋಟಾರು ವಾಹನ ಕಾಯ್ದೆ ಕಾನೂನನ್ನು ಉಲ್ಲಂಘಿಸಿರುವ ಘಟನೆ ಅಥಣಿಯಲ್ಲಿ ನಡೆದಿದೆ.

ಸೀಟ್​ ಬೆಲ್ಟ್​ ಧರಿಸದೇ ಪ್ರಯಾಣ ಮಾಡಿದ ಸಿಎಂ ಡಿಸಿಎಂ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಹಾಗೂ ಡಿಸಿಎಂ ಸವದಿ ಕಾರ್ಯಕ್ರಮ ಮುಗಿಸಿ ಮರಳಿ ಬಾಗಲಕೋಟೆ ಕಡೆ ಪ್ರಯಾಣ ಬೆಳಸುವಾಗ ಕಾರಿನಲ್ಲಿ ಸೀಟ್ ​ಬೆಲ್ಟ್ ಧರಿಸದೇ ಪ್ರಯಾಣ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ ಜನಸಾಮಾನ್ಯರು ದಂಡ ಕೇಳಿಯೇ ಗಾಡಿಯೇರಲು ಭಯಪಡುತ್ತಿದ್ದಾರೆ. ಅಂತದ್ರಲ್ಲಿ ನಮ್ಮನ್ನು ಆಳುವ ನಾಯಕರೇ ಹಿಂಗೆ ಮಾಡಿದ್ರೆ ಹೆಂಗೆ ಎಂಬ ಪ್ರಶ್ನೆಯಾಗಿದೆ. ಇದನ್ನ ಗಮನಿಸಿದರೆ ಉಳ್ಳವರಿಗೊಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಎಂಬಂತಾಗಿದೆ.

ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೇ ಮೋಟಾರು ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಅದು ಕೂಡ ಪೋಲಿಸ್ ಸಮ್ಮುಖದಲ್ಲೇ ನಡೆದಿದ್ದು, ಅದೇಷ್ಟೋ ದಂಡ ವಿಧಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ABOUT THE AUTHOR

...view details