ಕರ್ನಾಟಕ

karnataka

ETV Bharat / state

ಬಿಎಸ್​ವೈಗೆ ಜ್ವರ, ಸುಸ್ತು, ಮಾತ್ರೆ ತೆಗೆದುಕೊಂಡು ಪ್ರಚಾರ ನಡೆಸಿದ ಸಿಎಂ! - ಬೆಳಗಾವಿ ಲೋಕಸಭೆ ಉಪಚುನಾವಣೆ

ಬೆಳಗಾವಿಯಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಲು ಬಂದಿದ್ದ ಬಿಎಸ್​ವೈಗೆ ಜ್ವರ ಹಾಗೂ ಸುಸ್ತು ಕಾಣಿಸಿಕೊಂಡಿದ್ದು, ವಿಶ್ರಾಂತಿ ಪಡೆದು ಪ್ರಚಾರ ನಡೆಸಿದರು ಎಂದು ತಿಳಿದು ಬಂದಿದೆ.

Chief Minister BS Yediyurappa
Chief Minister BS Yediyurappa

By

Published : Apr 14, 2021, 11:04 PM IST

ಬೆಳಗಾವಿ:ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿಎಸ್​ವೈ ಅವರಿಗೆ ಜ್ವರ, ಸುಸ್ತು ಕಾಣಿಸಿಕೊಂಡಿದ್ದು, ಹೀಗಾಗಿ ಮಾತ್ರೆ ಸೇವನೆ ಮಾಡಿ ಪ್ರಚಾರ ನಡೆಸಿದರು ಎಂದು ವರದಿಯಾಗಿದೆ.

ಮಾತ್ರೆ ತೆಗೆದುಕೊಂಡು ಪ್ರಚಾರ ನಡೆಸಿದ ಸಿಎಂ

ಬುಧವಾರ ಮಧ್ಯಾಹ್ನವೇ ಇಲ್ಲಿಗೆ ಆಗಮಿಸಿದ್ದ ಬಿಎಸ್​ವೈ ನಿನ್ನೆ ಕೋವಿಡ್​ ಟೆಸ್ಟ್​ ಮಾಡಿಸಿಕೊಂಡಿದ್ದು, ಅದರ ವರದಿ ನೆಗೆಟಿವ್​ ಬಂದಿದೆ. ಆದರೆ, ಅವರನ್ನ ಜ್ವರ ಹಾಗೂ ಸುಸ್ತು ಕಾಣಿಸಿಕೊಂಡಿದ್ದರಿಂದ ಮಾತ್ರ ಸೇವನೆ ಮಾಡಿ, ಯುಕೆ- 27 ಹೋಟೆಲ್​​ನಲ್ಲಿ ವಿಶ್ರಾಂತಿ ಪಡೆದುಕೊಂಡರು. ಈ ವೇಳೆ ವೈದ್ಯರ ಸಲಹೆ ಮೇರೆಗೆ ಅವರು ಮಾತ್ರೆ ಸೇವನೆ ಮಾಡಿ ಮೂಡಲಗಿ ಹಾಗೂ ಗೋಕಾಕ್​​ನಲ್ಲಿ ಪ್ರಚಾರ ನಡೆಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಕ್ಷೇತ್ರದಲ್ಲಿ ಮಂಗಳಾ ಅಂಗಡಿ ಪರ ಸಿಎಂ ಯಡಿಯೂರಪ್ಪ ಪ್ರಚಾರ

ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದ ಕಾರಣ ಅವರು ಬಳಲಿದ್ದು, ಹೋಟೆಲ್​​ನಲ್ಲೇ ಬಿಮ್ಸ್​​ ಹಾಗೂ ಕೆಎಲ್​ಇ ವೈದ್ಯರು ತಪಾಸಣೆ ನಡೆಸಿ, ಮಾತ್ರೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹಲವು ಮಾರ್ಗಗಳಲ್ಲಿ ಯೋಜಸಿದ್ದ ರೋಡ್ ಶೋ ಮುಖ್ಯಮಂತ್ರಿ ಸೂಚನೆ ಮೇರೆಗೆ ಮೊಟಕುಗೊಳಿಸಲಾಗಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಪ್ರಚಾರ ಸಭೆಗಳಲ್ಲಿ ಭಾಗಿಯಾಗುತ್ತಿರುವ ಕಾರಣ ಅವರಿಗೆ ವಿಶ್ರಾಂತಿ ಕೊರತೆ ಉಂಟಾಗಿ ಸುಸ್ತು ಆಗಿ, ಜ್ವರ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಸುರೇಶ್​ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ ಮಂಗಳಾ ಅಂಗಡಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್​ನಿಂದ ಸತೀಶ್​ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ.

ABOUT THE AUTHOR

...view details