ಅಥಣಿ:ತಾಲೂಕಿನ ಕೊಟ್ಟಲಗಿ ಗ್ರಾಮದ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮಾನವೀಯತೆ ಮೆರೆದಿದ್ದಾರೆ.
ಮಗನನ್ನು ಕಳೆದುಕೊಂಡ ತಾಯಿಗೆ ಸಾಂತ್ವನ: ಧನಸಹಾಯ ನೀಡಿದ ಡಿಸಿಎಂ ಸವದಿ ಪುತ್ರ - Athani
ಕಳೆದ ಒಂದು ವಾರದ ಹಿಂದೆ ಕೊಟ್ಟಲಗಿ ಗ್ರಾಮದ ಚಪ್ಪಾರ ಕುಟುಂಬದ ವ್ಯಕ್ತಿವೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಮಗನನ್ನು ಕಳೆದುಕೊಂಡ ತಾಯಿಗೆ ಚಿದಾನಂದ ಸವದಿ ಸಾಂತ್ವನ ಹೇಳಿ ಆಹಾರ ಪದಾರ್ಥಗಳು ಹಾಗೂ ಆರ್ಥಿಕವಾಗಿ 25 ಸಾವಿರ ರೂ. ನೀಡಿದ್ದಾರೆ.
![ಮಗನನ್ನು ಕಳೆದುಕೊಂಡ ತಾಯಿಗೆ ಸಾಂತ್ವನ: ಧನಸಹಾಯ ನೀಡಿದ ಡಿಸಿಎಂ ಸವದಿ ಪುತ್ರ chidananda savadi Financial assistance](https://etvbharatimages.akamaized.net/etvbharat/prod-images/768-512-10795410-thumbnail-3x2-net.jpg)
ಕಳೆದ ಒಂದು ವಾರದ ಹಿಂದೆ ಕೊಟ್ಟಲಗಿ ಗ್ರಾಮದ ಚಪ್ಪಾರ ಕುಟುಂಬದ ವ್ಯಕ್ತಿವೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಮಗನನ್ನು ಕಳೆದುಕೊಂಡ ತಾಯಿಗೆ ಚಿದಾನಂದ ಸವದಿ ಸಾಂತ್ವನ ಹೇಳಿ ಆಹಾರ ಪದಾರ್ಥಗಳು ಹಾಗೂ 25 ಸಾವಿರ ರೂ. ಧನಸಹಾಯ ನೀಡಿದ್ದಾರೆ.
ರಸ್ತೆ ಅಪಘಾದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಚಿದಾನಂದ ಸವದಿ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕುಟುಂಬಸ್ಥರ ಮನೆಗೆ ಭೇಟಿ ನೀಡಿದ ಚಿದಾನಂದ ಸವದಿ ಮಗನನ್ನು ಕಳೆದುಕೊಂಡ ತಾಯಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳಿಗೆ ಸರ್ಕಾರದ ಅನುದಾನದಲ್ಲಿ ಮನೆ ಮಂಜೂರು ಮಾಡುವಂತೆ ಹೇಳಿದರು.