ಬೆಳಗಾವಿ: ವಿದೇಶಗಳಲ್ಲಿ ಕೆಲಸ ಕೊಡಿಸುವ ಬಣ್ಣ-ಬಣ್ಣದ ಕನಸು ತೋರಿಸಿ ವಂಚಿಸುತ್ತಿದ್ದ ಓರ್ವ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಶಾಹುನಗರದ ನಿವಾಸಿ ಇಮ್ತಿಯಾಜ್ ಯರಗಟ್ಟಿ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಉಮರ್ ಫಾರೂಖ್ ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿ ಆಗಿದ್ದು ಆತನ ಬಂಧನಕ್ಕೆ ಶೋಧ ಮುಂದುವರೆದಿದೆ.
ಹೊರದೇಶಗಳಲ್ಲಿ ಕೆಲಸ ಕೊಡಿಸುವ ಬಣ್ಣ-ಬಣ್ಣದ ಕನಸು ತೋರಿಸಿ ವಂಚಿಸುತ್ತಿದ್ದ ಆರೋಪಿ ಬಂಧನ ಈ ಇಬ್ಬರು ಆರೋಪಿಗಳು ಬೆಳಗಾವಿಯ ದರ್ಬಾರ್ ಗಲ್ಲಿಯ ಟ್ರಾವೆಲ್ ವರ್ಲ್ಡ್ ಜಾಬ್ ಕನ್ಸಲ್ಟಂಟ್ಸ್ ಹಾಗೂ ಶೆಟ್ಟಿ ಗಲ್ಲಿಯ ಸ್ಟ್ಯಾಂಡರ್ಡ್ ಗ್ರೂಪ್ ಆಫ್ ಎಂಟರ್‌ಪ್ರೈಸ್ ಎಂಬ ಹೆಸರಿನ ಎರಡು ಪ್ರತ್ಯೇಕ ನಕಲಿ ಜಾಬ್ ಕನ್ಸಲ್ಟನ್ಸಿ ಸೆಂಟರ್ ಗಳನ್ನು ನಡೆಸುತ್ತಿದ್ದರು. ಅದಕ್ಕಾಗಿ ಕರಪತ್ರ ತಯಾರಿಸಿ ಅವುಗಳನ್ನು ಹಂಚಿ ಪ್ರಚಾರ ಮಾಡಿ ಹೊರದೇಶದಲ್ಲಿ ಕೆಲಸ ಕೊಡಿಸುವುದಾಗಿ ಜನರಿಗೆ ನಂಬಿಸಿ ಮೋಸ ಮಾಡುತ್ತಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ:100 ಕೋಟಿ ಆಸ್ತಿಗಾಗಿ ವ್ಯಕ್ತಿಯ ಕೊಲೆ... ಮಗ-ತಮ್ಮನಿಂದಲೇ ಸುಪಾರಿ: ವರ್ಷದ ಬಳಿಕ ಹಂತಕರು ಅರೆಸ್ಟ್!
ಈ ಬಗ್ಗೆ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಿದ್ದು, 1.13 ಲಕ್ಷ ಹಣ, 315 ಪಾಸ್‌ಪೋರ್ಟ್‌ಗಳು, ಐದು ಕಂಪ್ಯೂಟರ್, ಮೂರು ಮೊಬೈಲ್, ಕರಪತ್ರಗಳು, ಲೀಸ್ ಅಗ್ರಿಮೆಂಟ್ ಸೇರಿ ಹಲವು ದಾಖಲಾತಿಗಳನ್ನು ಮಾಡಿಕೊಂಡಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.