ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರ ಪರಿಹಾರದ ಹಣ ಕಂಡ ಕಂಡವರ ಪಾಲು.. ಇದಲ್ವೇ ಹಗಲು ದರೋಡೆ? - ಬೆಳಗಾವಿ ನೆರೆ ಪರಿಹಾರ ಹಣ

ಮುಖಂಡರ ಬಳಿ ಹೋದ್ರೆ 10 ಸಾವಿರ ಚೆಕ್ ಪಡೆದು ಎಂಟೂವರೆ ಸಾವಿರ ರೂ. ನೀಡುತ್ತಿದ್ದಾರೆ. ಬಳಿಕ ಸಂತ್ರಸ್ತರ ಚೆಕ್‌ಗಳನ್ನು ಮುಖಂಡರು ‌ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್ ‌ಸಿಬ್ಬಂದಿ ಗ್ರಾಮದ‌ ಮುಖಂಡರು-ಏಜೆಂಟರಗಳಿಗೆ ಸಾಥ್ ನೀಡುತ್ತಿರುವ ಆರೋಪ‌ ಕೇಳಿ ಬಂದಿದೆ.

ಹಣ ಬೇಕಿದ್ರೆ ಕೊಡ್ಬೇಕಿದೆ ಲಂಚ

By

Published : Sep 6, 2019, 3:20 PM IST

ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಬಿಡುಗಡೆ ಮಾಡಿರುವ ₹10 ಸಾವಿರ ಚೆಕ್ ಮೇಲೆ‌ ಅಧಿಕಾರಿಗಳು ಹಾಗೂ ಏಜೆಂಟರ್‌ಗಳ ಕಣ್ಣು ಬಿದ್ದಂತಿದೆ. ನಿರಾಶ್ರಿತರ ಕೈಗೆ ಸರ್ಕಾರದ ಪೂರ್ಣ ಪ್ರಮಾಣದ ಹಣ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.

ಪ್ರತಿ ಚೆಕ್‌ಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಏಜೆಂಟರ್‌ಗಳು ಸಂತ್ರಸ್ತರಿಂದ ₹1500-₹3000 ಸಾವಿರ ಪಡೆಯುತ್ತಿದ್ದಾರಂತೆ. ಉಪಮುಖ್ಯಮಂತ್ರಿ ಇರುವ ಜಿಲ್ಲೆಯಲ್ಲೇ ಸಂತ್ರಸ್ತರ ಹಣ ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ರಾಮದುರ್ಗ, ಗೋಕಾಕ್, ಅರಭಾವಿ ಕ್ಷೇತ್ರದಲ್ಲಿ ಈ ದಂಧೆ ನಡೆಯುತ್ತಿದೆ. ತಕ್ಷಣವೇ ಹಣ ಬೇಕಾದ್ರೇ ಗ್ರಾಮದ ಮುಖಂಡರನ್ನು ಸಂಪರ್ಕಿಸುವಂತೆ ರಾಮದುರ್ಗದ ತಾಲೂಕಿನ ಹಂಪಿಹೊಳಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ‌ದೂರಿದ್ದಾರೆ.

ಸಂತ್ರಸ್ತರ ಹಣದ ಮೇಲೂ ದುರುಳರ ಕಣ್ಣು..

ಮುಖಂಡರ ಬಳಿ ಹೋದ್ರೆ 10 ಸಾವಿರ ಚೆಕ್ ಪಡೆದು ಎಂಟೂವರೆ ಸಾವಿರ ರೂ. ನೀಡುತ್ತಿದ್ದಾರೆ. ಬಳಿಕ ಸಂತ್ರಸ್ತರ ಚೆಕ್‌ಗಳನ್ನು ಮುಖಂಡರು ‌ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್ ‌ಸಿಬ್ಬಂದಿ ಗ್ರಾಮದ‌ ಮುಖಂಡರು-ಏಜೆಂಟರಗಳಿಗೆ ಸಾಥ್ ನೀಡುತ್ತಿರುವ ಆರೋಪ‌ ಕೇಳಿ ಬಂದಿದೆ. ಇನ್ನು‌, ಕೆಲವೆಡೆ ಸಂತ್ರಸ್ತರಲ್ಲದವರಿಗೂ ಚೆಕ್ ವಿತರಣೆ ‌ಮಾಡಲಾಗುತ್ತಿದೆ. ಈ ದಂಧೆಯಲ್ಲಿ ಜನಪ್ರತಿನಿಧಿಗಳ ಹಾಗೂ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರಾ ಎಂಬ ಅನುಮಾನವೂ ಕಾಡುತ್ತಿದೆ.

ABOUT THE AUTHOR

...view details