ಚಿಕ್ಕೋಡಿ: ಈ ಬಾರಿ ಹುಕ್ಕೇರಿ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಹುಕ್ಕೇರಿ ಬಿಇಒ ಅವರಿಗೆ 5 ಸಾವಿರಕ್ಕೂ ಅಧಿಕ ಮಾಸ್ಕ್ ನೀಡಿದರು.
ಹುಕ್ಕೇರಿ ಮಠದಲ್ಲಿ ಹುಕ್ಕೇರಿ ಬಿಇಒ ಮೋಹನ್ ದಂಡಿನ್ ಅವರಿಗೆ ಮಾಸ್ಕ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಈ ಬಾರಿ ಹುಕ್ಕೇರಿ ತಾಲೂಕಿನಲ್ಲಿ 6,470 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಈ ಕೊರೊನಾ ಮಹಾಮಾರಿ ಬಂದಿದ್ದರಿಂದ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲರಿಗೂ ಕೂಡ ಆರೋಗ್ಯ ತಪಾಸಣೆಯ ಜೊತೆಗೆ ಮಾಸ್ಕ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ. ಅದರ ಜೊತೆಗೆ ಹುಕ್ಕೇರಿ ಶ್ರೀ ಮಠದಿಂದ ಮಾಸ್ಕಗಳನ್ನು ನೀಡಿದ್ದೇವೆ ಎಂದರು.