ಅಥಣಿ: ಹಿಂದೂ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ಬಹಿರಂಗವಾಗಿ ಚರ್ಚೆಗೆ ಬರುವಂತೆ ಹಿಂದೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಯಮಕರಮಡಿ ಗ್ರಾಮದಲ್ಲಿ 'ನಾನು ಹಿಂದೂ' ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಜಾತಿಯ ಬಗ್ಗೆ ಮಾತನಾಡಿದರೆ ಸುಮ್ಮನಿರುತ್ತೇನೆ. ನನ್ನನ್ನು ವೈಯಕ್ತಿಕವಾಗಿ ಬೈದರೂ ಸುಮ್ಮನಿರುವೆ. ಆದರೆ ನನ್ನ ತಾಯಿ ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಸುಮ್ಮನೆ ಬಿಡುವುದಿಲ್ಲ. ಹಿಂದೂ ಧರ್ಮದ ಬಗ್ಗೆ ಮಾತನಾಡುವುದಕ್ಕಾಗಿ ನಾನು ಬಹಿರಂಗವಾಗಿ ಚರ್ಚೆಗೆ ಕರೆಯುತ್ತೇನೆ, ಬನ್ನಿ ಸಾಹುಕಾರೇ. ಯಾವಾಗ ಹೇಳುತ್ತೀರಿ ಆವಾಗ ನಾನು ಬರುತ್ತೇನೆ ಎಂದು ಸೂಲಿಬೆಲೆ ಹೇಳಿದರು. ಬೂಟ್ ಪಾಲಿಶ್ ಮಾಡಿ ಬದುಕಬೇಕು, ಬೂಟ್ ನೆಕ್ಕಿ ಜೀವನ ಮಾಡಬಾರದು ಎಂದು ಇದೇ ವೇಳೆ ಖಾರವಾಗಿ ನುಡಿದರು.