ಚಿಕ್ಕೋಡಿ(ಬೆಳಗಾವಿ): ಹಲವು ಸಮುದಾಯಗಳ ಬೇಡಿಕೆಯ ನಡುವೆ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಧೈರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೋರಿದ್ದಾರೆ. ಅವರ ಧೈರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇವೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ನಿಪ್ಪಾಣಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಗೆ ಈ ರೀತಿಯ ಎದೆಗಾರಿಕೆ ಇರಲಿಲ್ಲ. ಮೀಸಲಾತಿ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿ ಸದನದಲ್ಲಿ ಮಂಡನೆ ಮಾಡುತ್ತಾರೆ. ಸದನದಲ್ಲಿ ಮಂಡನೆ ಮಾಡಿ ಕಾನೂನು ತೊಡಕುಗಳು ಹಾಗೂ ಸುಪ್ರೀಂಕೋರ್ಟ್ ತೀರ್ಮಾನದ ಕುರಿತು ಚರ್ಚೆಯಾಗುತ್ತದೆ ಎಂದರು.
ಇನ್ನು ಶೋಷಿತ ವರ್ಗಕ್ಕೆ ಮೀಸಲಾತಿ ಅವಶ್ಯಕತೆ ಇದೆ ಎನ್ನುವ ಧೈರ್ಯ ತೋರಿದ್ದಾರಲ್ಲ ಅದಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಸದಾಶಿವ ಆಯೋಗದ ವರದಿ ಜಾರಿ ಮಾಡಲು ಕಾಂಗ್ರೆಸ್ ಸಚಿವ ಆಂಜನೇಯ ಅವರು ಕಡತ ಹಿಡಿದುಕೊಂಡು ಕ್ಯಾಬಿನೆಟ್ಗೆ ಹೋದರು. ಆದರೆ ಮಂಡನೆ ಮಾಡಲು ಆಗಿಲ್ಲ. ಅವರ ವರದಿ ಮಂಡನೆ ಮಾಡುವುದಕ್ಕೆ ಕಾಂಗ್ರೆಸ್ ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು.
ಶಾಸಕ ಯತ್ನಾಳ ವಿಚಾರದಲ್ಲಿ ನಾವು ಮಾತನಾಡುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ : ನಾರಾಯಣಸ್ವಾಮಿ ಶಾಸಕ ಯತ್ನಾಳ ವಿಚಾರದಲ್ಲಿ ನಾವು ಮಾತನಾಡುವುದಿಲ್ಲ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಯತ್ನಾಳ ವಿಚಾರದಲ್ಲಿ ನಾವು ಮಾತನಾಡುವುದಿಲ್ಲ. ಈ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ನಮ್ಮ ರಾಜ್ಯದ ಅಧ್ಯಕ್ಷರು ಎಲ್ಲವನ್ನೂ ನೋಡುತ್ತಿದ್ದಾರೆ. ಕಾರ್ಯಕರ್ತರಿಂದ ನಮಗೆ ನಮ್ಮ ಐಡೆಂಟಿಟಿ ಸಿಕ್ಕಿದೆ. ಎಲ್ಲರೂ ಮಾನವೀಯ ಮೌಲ್ಯಗಳನ್ನು ಇಟ್ಟುಕೊಳ್ಳಬೇಕು. ಎಲ್ಲ ರಾಜಕಾರಣಿಗಳು ಎಲ್ಲರನ್ನೂ ಗೌರವಿಸುವ ಮಾನವೀಯ ಮೌಲ್ಯಗಳನ್ನು ಕಲಿಯಬೇಕು ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ :ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಸರಾ ಮಾಡಿದ್ದಾರೆ: ಹೆಚ್.ವಿಶ್ವನಾಥ್ ಆರೋಪ