ಬೆಳಗಾವಿ: ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿರುವ ಸ್ವಚ್ಛತಾ ವಾಹನಗಳಿಗೆ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಹಸಿರು ನಿಶಾನೆ ತೋರಿಸಿದರು. ಜಿಪಂ ಅಧ್ಯಕ್ಷ ಆಶಾ ಐಹೊಳೆ ಹಾಗೂ ಜಿಪಂ ಸಿಇಓ ಕೆ.ವಿ.ರಾಜೇಂದ್ರ ಈ ವೇಳೆ ಇದ್ದರು.
ಬೆಳಗಾವಿ: ಸ್ವಚ್ಛತಾ ವಾಹನಗಳಿಗೆ ಹಸಿರು ನಿಶಾನೆ ತೋರಿದ ಕೇಂದ್ರ ಸಚಿವ - central minister green signal For cleaning vehicles
ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿರುವ ಸ್ವಚ್ಛತಾ ವಾಹನಗಳಿಗೆ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಚಾಲನೆ ನೀಡಿದರು.
ಹಸಿರು ನಿಶಾನೆ ತೋರಿದ ಸಚಿವ
ಕೆ.ವಿ.ರಾಜೇಂದ್ರ ಮಾತನಾಡಿ, ನಗರಗಳಂತೆ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಜಿಪಂ ನಿರ್ಧರಿಸಿದೆ. ಹೀಗಾಗಿ, ಪ್ರತಿ ಗ್ರಾಮ ಪಂಚಾಯಿತಿಗೂ ಬಿಡುಗಡೆಯಾದ ಅನುದಾನವನ್ನೂ ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಪ್ರತಿ ಗ್ರಾಪಂಗೂ ಬಿಡುಗಡೆಯಾಗಿರುವ ಅನುದಾನದ ಕುರಿತು ಸಿಇಓ ಸಂಪೂರ್ಣ ಮಾಹಿತಿ ನೀಡಿದರು.