ಕರ್ನಾಟಕ

karnataka

By

Published : Sep 5, 2021, 2:39 PM IST

ETV Bharat / state

ಕೇಂದ್ರ ತಂಡದ ಕಾಟಾಚಾರದ ನೆರೆ ಅಧ್ಯಯನ : ಅಧಿಕಾರಿಗಳ ವಿರುದ್ಧ ಸಂತ್ರಸ್ತ ಆಕ್ರೋಶ

ಇಂದು ಬೆಳಗಾವಿ ಜಿಲ್ಲೆಗೆ ಆಗಮಿಸಿರುವ ಸುಶೀಲ್ ಪಾಲ್ ನೇತೃತ್ವದ 7 ಅಧಿಕಾರಿಗಳಿರುವ ಕೇಂದ್ರ ನೆರೆ ಅಧ್ಯಯನ ತಂಡ, ಅರ್ಧ ಗಂಟೆಯಲ್ಲಿ ಮೂರು‌ ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಯಾರೊಬ್ಬರ ಸಂಕಷ್ಟ ಆಲಿಸದೇ ವಾಪಸ್ ಆಗಿದೆ..

Union government A flood assessment team return to the Belagavi
ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್​ ಆದ ಕೇಂದ್ರ ತಂಡ

ಬೆಳಗಾವಿ: ಕೇಂದ್ರದಿಂದ ನೆರೆ ಪರಿಹಾರ ವೀಕ್ಷಣೆಗೆಂದು ಬೆಳಗಾವಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡ ಅರ್ಧ ಗಂಟೆಯಲ್ಲಿ ಮೂರು‌ ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವಾಪಸ್ ಬೆಳಗಾವಿಗೆ ತೆರಳಿದೆ.

ಇಂದು ಬೆಳಗಾವಿ ಜಿಲ್ಲೆಗೆ ಆಗಮಿಸಿರುವ ಸುಶೀಲ್ ಪಾಲ್ ನೇತೃತ್ವದ 7 ಜನರಿರುವ ಕೇಂದ್ರ ನೆರೆ ಅಧ್ಯಯನ ತಂಡ, ನಗರದ ಸರ್ಕೀಟ್ ಹೌಸ್‌ನಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಜಿಪಂ ಸಿಇಒ ದರ್ಶನ್ ಹೆಚ್ ವಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಅಲ್ಲಿಂದ‌ ಖಾನಾಪೂರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್​ ಆದ ಕೇಂದ್ರ ಅಧ್ಯಯನ ತಂಡ

ಈ ವೇಳೆ ಮಲಪ್ರಭಾ ನದಿ ಬ್ರಿಡ್ಜ್, ಖಾನಾಪುರ ಪೊಲೀಸ್ ತರಬೇತಿ ಶಾಲೆ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಮಲಪ್ರಭಾ ನದಿಯಿಂದ ಉಂಟಾದ ಹಾನಿ ಕುರಿತು ಮಾಹಿತಿ ನೀಡಿದರು.

ಕೇಂದ್ರ ನೆರೆ ಅಧ್ಯಯನ ತಂಡದಿಂದ ಕಾಟಾಚಾರದ ಭೇಟಿ :ಬೆಳಗಾವಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡ ಅರ್ಧ ಗಂಟೆಯಲ್ಲಿ ಮೂರು‌ ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು‌. ಖಾನಾಪುರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ತಂಡ, ತರಾತುರಿಯಲ್ಲಿ ಭೇಟಿ‌ ನೀಡಿ ಅರ್ಧಗಂಟೆಯಲ್ಲಿ ಮೂರು ಸ್ಥಳಗಳನ್ನು ವೀಕ್ಷಣೆ ನಡೆಸಿ ಬೆಳಗಾವಿಯತ್ತ ಹೊರಟಿತು. ಈ ವೇಳೆ ನೆರೆ ಸಂತ್ರಸ್ತರನ್ನು ಭೇಟಿ ಮಾಡದೇ ಅಧಿಕಾರಿಗಳು ಹೇಳಿದ್ದನ್ನಷ್ಟೇ ಕೇಳಿ ಅಧ್ಯಯನವನ್ನ ಮುಗಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಖಾನಾಪುರ ತಾಲೂಕಿನ ಮಾರುತಿ ನಗರದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ನೆರೆಯಿಂದ ಕೊಚ್ಚಿ ಹೋಗಿತ್ತು. ಅದನ್ನು ವೀಕ್ಷಣೆ ಮಾಡಿದ ಬಳಿಕ ಖಾನಾಪುರದ ಪೊಲೀಸ್ ತರಬೇತಿ ಶಾಲೆ ಹಾಗೂ ಕೋಳಿ ಫಾರಂಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಕಾಟಾಚಾರಕ್ಕೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಕೇಂದ್ರ ಅಧ್ಯಯನ ತಂಡ, ಬೆಳಗಾವಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ ನಾಶವಾಗಿದ್ದರೂ ಒಬ್ಬ ರೈತನ ಸಂಕಷ್ಟ ಆಲಿಸದೇ, ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಸ್ ಆಗಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details