ಕರ್ನಾಟಕ

karnataka

ETV Bharat / state

ರಾಜ್ಯೋತ್ಸವದಂದು ಕರಾಳ ದಿನಾಚರಣೆ ಮೆರವಣಿಗೆ, ಆಕ್ಷೇಪಾರ್ಹ ಘೋಷಣೆ; ಎಂಇಎಸ್​ನ 18 ಜನರ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಿಸಿದ ಎಂಇಎಸ್​ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿದ್ದರು.

ಎಂಇಎಸ್​ನ 18 ಜನರ ವಿರುದ್ಧ ಪ್ರಕರಣ ದಾಖಲು
ಎಂಇಎಸ್​ನ 18 ಜನರ ವಿರುದ್ಧ ಪ್ರಕರಣ ದಾಖಲು

By ETV Bharat Karnataka Team

Published : Nov 3, 2023, 12:06 PM IST

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಿಸಿ, ನಾಡದ್ರೋಹಿ ಘೋಷಣೆಗಳನ್ನು ಕೂಗಿದ ಮಹಾರಾಷ್ಟ್ರ ಏಕೀಕಕರಣ ಸಮಿತಿಯ (ಎಂಇಎಸ್) 18 ಸದಸ್ಯರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತದಿಂದ ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಲಾಗಿತ್ತು. ಅನುಮತಿ ಇಲ್ಲದೇ ಇದ್ದರೂ ಕೂಡ ನಗರದಲ್ಲಿ ಕರಾಳ ದಿನ ಹೆಸರಲ್ಲಿ ಮೆರವಣಿಗೆ ಮಾಡಿ ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದರು.

ಎಂಇಎಸ್ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸರು, ಎಂಇಎಸ್‌ನ ಮಾಳೋಜಿರಾವ್ ಅಷ್ಟೇಕರ್, ಮಾಜಿ ಶಾಸಕ ಮನೋಹರ ಕಿಣೇಕರ್, ರಂಜಿತ್ ಚವ್ಹಾಣಪಾಟೀಲ, ಸರಿತಾ ಪಾಟೀಲ, ಸಾರಿಕಾ ಪಾಟೀಲ, ಅಮರ ಯಳ್ಳೂರಕರ್, ಪ್ರಕಾಶ ಮರಗಾಳೆ ರವಿ ಸಾಳುಂಕೆ, ಅಂಕುಶ ಕೇಸರಕರ್ ಸೇರಿದಂತೆ 18 ಜನರ ವಿರುದ್ಧ ಕೇಸ್ ದಾಖಲಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :ಕನ್ನಡ ರಾಜ್ಯೋತ್ಸವ: ಕರಾಳ ದಿನ ಆಚರಿಸುತ್ತೇವೆ ಎಂದ ಮಹಾ ಸಿಎಂ.. ಸಂಸದ, ಸಚಿವರಿಗೆ ಬೆಳಗಾವಿ ಪ್ರವೇಶ ನಿರ್ಬಂಧ ಹೇರಿ ಡಿಸಿ ಆದೇಶ

ನ.1 ರಂದು ಬೆಳಗಾವಿಯಲ್ಲಿ ಎಂಇಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದ ಕೊಲ್ಲಾಪುರದ ಶಿವಸೇನೆ ಮುಖಂಡ ವಿಜಯ ದೇವನೆ ಮತ್ತು ನೂರಾರು ಕಾರ್ಯಕರ್ತರನ್ನು ಕರ್ನಾಟಕ-ಮಹಾರಾಷ್ಟ್ರ ಗಡಿ ಕೊಗನೊಳ್ಳಿ ಚೆಕ್ ಪೋಸ್ಟನಲ್ಲೇ ಕರ್ನಾಟಕ ಪೊಲೀಸರು ತಡೆದಿದ್ದರು. ಬಳಿಕ ಶಿವಸೇನೆ ಮುಖಂಡರು ಮತ್ತು ಕಾರ್ಯಕರ್ತರನ್ನು ಕೊಲ್ಲಾಪುರ ಪೊಲೀಸರ ವಶಕ್ಕೆ ಜಿಲ್ಲೆಯ ಪೊಲೀಸರು ನೀಡಿದ್ದರು.

ರಾಜ್ಯೋತ್ಸವದಂದು ಮಹಾರಾಷ್ಟ್ರ ಸರ್ಕಾರದ ಮೂವರು ಸಚಿವರು ಹಾಗೂ ಸಂಸದರೊಬ್ಬರಿಗೆ ಬೆಳಗಾವಿ ಮಹಾನಗರ ಮತ್ತು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದರು. ಸಚಿವರಾದ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ, ದೀಪಕ‌ ಕೇಸರಕರ್ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿಯಲ್ಲಿ ನಡೆಯುವ ಕರಾಳ ದಿನದ ಸಭೆಯಲ್ಲಿ ಭಾಗವಹಿಸಿ ಪ್ರಚೋದನಕಾರಿ ಭಾಷಣ‌ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು. ಹೀಗಾಗಿ ಈ ನಾಲ್ವರಿಗೆ ಬೆಳಗಾವಿ ನಗರ ಮತ್ತು ಜಿಲ್ಲಾ‌ ಪ್ರವೇಶ ನಿರ್ಬಂಧಿಸಿ ಖಡಕ್ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ:ಶಿವಸೇನೆ ಕಾರ್ಯಕರ್ತರನ್ನು ಗಡಿಯಲ್ಲೇ ತಡೆದು ವಾಪಸ್ ಕಳುಹಿಸಿದ ಬೆಳಗಾವಿ ಪೊಲೀಸರು

ABOUT THE AUTHOR

...view details