ಕರ್ನಾಟಕ

karnataka

ETV Bharat / state

ಜೋಳಿಗೆ ಹಾಕಿದ ಪೂಜಾರಿ, ಸಿಎಂ ವಿರುದ್ಧ ದೂರು ದಾಖಲಿಸಿಕೊಂಡ ಚುನಾವಣಾ ಆಯೋಗ - ಅಶೋಕ್ ಪೂಜಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸುದ್ದಿ

ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಜಿಲ್ಲೆಯ ಮೂರು ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗ ಒಟ್ಟು ಐದು ದೂರುಗಳನ್ನು ದಾಖಲಿಸಿದೆ.

case registered against cm yadiyurappa, ಸಿಎಂ ವಿರುದ್ಧ ದೂರು
ಸಿಎಂ ವಿರುದ್ಧ ದೂರು

By

Published : Nov 27, 2019, 11:42 PM IST

ಬೆಳಗಾವಿ: ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಜಿಲ್ಲೆಯ ಮೂರು ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗ ಒಟ್ಟು ಐದು ದೂರುಗಳನ್ನು ದಾಖಲಿಸಿದೆ.

ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ಹಾಗೂ ಗೋಕಾಕ್​ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ‘ವೀರಶೈವ’ ಸಮಾಜದ ಹೆಸರು ಬಳಕೆ ಮಾಡಿ ಮತಯಾಚಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಗೋಕಾಕ್​ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಶೋಕ ಪೂಜಾರಿ ಅವರು ಖಾವಿ ಬಟ್ಟೆ ಧರಿಸಿ, ವೀರಶೈವ ಲಿಂಗಾಯತ ಸಮಾಜದ ಸಂಕೇತವಾಗಿರುವ ಜೋಳಿಗೆಯನ್ನು ಹಾಕಿಕೊಂಡು ಸಮಾಜದ ಜನರಿಂದ ಹಣ ಪಡೆದು ಮತಯಾಚನೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಆಯೋಗ ದೂರು ದಾಖಲಿಸಿದೆ.

ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರ ನಿವಾಸದಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಅನುಮತಿ ಪಡೆಯದೆ ಖಿಳೇಗಾಂವ್​ದಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details