ಕರ್ನಾಟಕ

karnataka

ETV Bharat / state

ಅಪಾಯದ ಮಟ್ಟ ಮೀರಿದ ಕೃಷ್ಣೆ.... ಮಾದರಿಯಾಗಬೇಕಾದ ಅಧಿಕಾರಿಯೇ ನಿರ್ಲಕ್ಷಿಸಿದಾಗ...! - ಜಿಲ್ಲಾಡಳಿತ ತಂಡ

ಚಿಕ್ಕೋಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನದಿಗೆ ಹೋದ ಜಿಲ್ಲಾಡಳಿತ ತಂಡ ಲೈಫ್ ಜಾಕೆಟ್ ಧರಿಸದೇ ಬೋಟ್​ನಲ್ಲಿ ಪ್ರಯಾಣ ಬೆಳೆಸಿದ ತಾಲೂಕಿನ ಉಪ ವಿಭಾಗಾಧಿಕಾರಿಯಿಂದಲೇ ಕೇರಲೆಸ್ ಆಗಿದೆ.

ಜಿಲ್ಲಾಡಳಿತ ತಂಡ

By

Published : Aug 3, 2019, 10:55 AM IST

ಚಿಕ್ಕೋಡಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನದಿಗೆ ಹೋದ ಜಿಲ್ಲಾಡಳಿತ ತಂಡ ಲೈಫ್ ಜಾಕೆಟ್ ಧರಿಸದೆ ಬೋಟ್​ನಲ್ಲಿ ಪ್ರಯಾಣ ಬೆಳೆಸಿದ ತಾಲೂಕಿನ ಉಪ ವಿಭಾಗಾಧಿಕಾರಿಯಿಂದಲೇ ಕೇರಲೆಸ್ ಆಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಕೃಷ್ಣಾ ನದಿ ವೀಕ್ಷಣೆ ಸಂದರ್ಭದಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿದ್ದಾರೆ.

ಉಪವಿಭಾಗಾಧಿಕಾರಿಗಳಿಂದ ಎಚ್ಚರಿಕೆ

ತಾಲೂಕಿನ ಉಪ ವಿಭಾಗಾಧಿಕಾರಿ ತಹಶೀಲ್ದಾರ್​ ಹಾಗೂ ವಿಪತ್ತು ನಿರ್ವಹಣಾ ತಂಡದಿಂದಲೇ ಯಡವಟ್ಟಾಗಿದೆ. ಲೈಫ್ ಜಾಕೆಟ್ ಧರಿಸದೇ ಒಂದೇ ಬೋಟ್​ನಲ್ಲಿ 20 ಕ್ಕೂ ಹೆಚ್ಚು ಜನ ಪ್ರಯಾಣ ಮಾಡಿದ್ದು, ಎಸಿ, ತಹಶೀಲ್ದಾರ್​, ಪೊಲೀಸ್ ಅಧಿಕಾರಿಗಳು, ಮಹಿಳೆಯರು ಹಾಗೂ ಸಿಬ್ಬಂದಿ ಪ್ರಯಾಣ ಮಾಡಿದ್ದಾರೆ. ಆದರೆ, ಯಾರು ಸಹ ಲೈಫ್ ಜಾಕೆಟ್ ಹಾಕುವ ಗೋಜಿಗೆ ಹೊಗಿಲ್ಲ.

ಲೈಫ್ ಜಾಕೆಟ್ ಧರಿಸಿ ಜನರಿಗೆ ಮಾದರಿಯಾಗಬೇಕಾದ ಅಧಿಕಾರಿಯಿಂದಲೇ ಕೇರಲೆಸ್

ತಾಲೂಕಿನ ಎ.ಸಿ. ರವೀಂದ್ರ ಹಾಗೂ ತಹಶೀಲ್ದಾರ್​ ಸಂತೋಷ ಬಿರಾದಾರ ಲೈಫ್ ಜಾಕೆಟ್ ಧರಿಸಿ ಜನರಿಗೆ ಮಾದರಿಯಾಗಬೇಕಾದ ಅವರೇ ನಿಷ್ಕಾಳಜಿತನ ತೋರಿದ್ದಾರೆ.

ABOUT THE AUTHOR

...view details