ಕರ್ನಾಟಕ

karnataka

ETV Bharat / state

ಬೆಳಗಾವಿ ಜಿಲ್ಲೆಯಲ್ಲಿ 118 ಜನರ ಮೇಲೆ ನಿಗಾ: ಜಿಲ್ಲಾಧಿಕಾರಿ

ಜಿಲ್ಲೆಗೆ ವಿದೇಶದಿಂದ ಇದುವರೆಗೆ 134 ಜನರು ಆಗಮಿಸಿದ್ದು, ಒಟ್ಟು 118 ಜನರನ್ನು ಅವರವರ ಮನೆಯಲ್ಲಿಯೇ ನಿಗಾದಲ್ಲಿರಿಸಲಾಗಿದೆ. 17 ಜನರು 14 ದಿನಗಳ ಕ್ವಾರಂಟೈನ್ ಅವಧಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Care over 118 people in Belgaum district
ಬೆಳಗಾವಿ ಜಿಲ್ಲೆಯಲ್ಲಿ 118 ಜನರ ಮೇಲೆ ನಿಗಾ: ಜಿಲ್ಲಾಧಿಕಾರಿ ಹೇಳಿಕೆ

By

Published : Mar 20, 2020, 5:36 PM IST

ಬೆಳಗಾವಿ:ಜಿಲ್ಲೆಗೆ ವಿದೇಶದಿಂದ ಇದುವರೆಗೆ 134 ಜನರು ಆಗಮಿಸಿದ್ದು, ಅದರಲ್ಲಿ ಮೂರು ಜನರು 28 ದಿನಗಳ ಕ್ವಾರಂಟೈನ್(ಗೃಹ ನಿಗಾ) ಅವಧಿ ಪೂರ್ಣಗೊಳಿಸಿದ್ದಾರೆ. ಯಾರಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು 118 ಜನರನ್ನು ಅವರವರ ಮನೆಯಲ್ಲಿಯೇ ನಿಗಾದಲ್ಲಿರಿಸಲಾಗಿದೆ. 17 ಜನರು 14 ದಿನಗಳ ಕ್ವಾರಂಟೈನ್ ಅವಧಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಇದುವರೆಗೆ ಒಟ್ಟು ಇಬ್ಬರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ ಎಂದು‌ ಅವರು ತಿಳಿಸಿದ್ದಾರೆ.

ಸಂಪೂರ್ಣ ಸ್ಕ್ರೀನಿಂಗ್:ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರ ಸ್ಕ್ರೀನಿಂಗ್ (ತಪಾಸಣೆ) ಮಾಡಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರನ್ನು ಕೂಡ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಜೊತೆಗೆ ಜಿಲ್ಲೆಯ ಗಡಿಯಲ್ಲಿ ಗೋವಾ ಮತ್ತು ಮಹಾರಾಷ್ಟ್ರದಿಂದ ಬಸ್​ನಲ್ಲಿ ಆಗಮಿಸುವ ಪ್ರಯಾಣಿಕರನ್ನು ಕೂಡ ಆರೋಗ್ಯ ಇಲಾಖೆಯ ತಂಡಗಳು ತಪಾಸಣೆ ನಡೆಸುತ್ತಿವೆ. ಬಸ್ ನಿಲ್ದಾಣದಲ್ಲೂ ತಪಾಸಣಾ ಕಾರ್ಯ ನಡೆದಿದೆ. ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಸಿಬ್ಬಂದಿಯ ಸ್ಕ್ರೀನಿಂಗ್ ಕೂಡ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details