ಕರ್ನಾಟಕ

karnataka

ETV Bharat / state

ನೋಡ ನೋಡುತ್ತಿದ್ದಂತೆಯೇ ಕಾರಿಗೆ ಡಿಕ್ಕಿ ಹೊಡೆದ ಎತ್ತಿನ ಗಾಡಿ...: ವಿಡಿಯೋ - car attinagadi accident

ನಯಾನಗರದ ಮಲಪ್ರಭಾ ನದಿಯ ಮೇಲ್ಸೆತುವೆ ಬಳಿ ಎತ್ತಿನ ಗಾಡಿ ಎದುರಿಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಕಾರು ಚಾಲಕ ಗಾಯಗೊಂಡಿದ್ದಾನೆ.

accident
ಎತ್ತಿನ ಗಾಡಿ

By

Published : Jan 16, 2020, 12:35 PM IST

ಬೆಳಗಾವಿ:ಚಲಿಸುವ ಕಾರಿಗೆ ಎತ್ತಿನ‌ ಗಾಡಿ ಡಿಕ್ಕಿ ಹೊಡೆದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನಡೆದಿದೆ.

ಕಾರಿಗೆ ಡಿಕ್ಕಿ ಹೊಡೆದ ಎತ್ತಿನ ಗಾಡಿ

ಎತ್ತಿನಗಾಡಿಯಲ್ಲಿ ಬೈಲಹೊಂಗಲದ ಭಕ್ತರು ಸವದತ್ತಿ ರೇಣುಕಾ ದೇವಿ ಜಾತ್ರೆಗೆ ಹೋಗಿದ್ದರು. ಮರಳಿ ಬರುವಾಗ ಎತ್ತಿನ ಗಾಡಿಗಳು ನಾ ಮುಂದೆ, ತಾ ಮುಂದೆ ಎಂದು ಹೋಗಲು ಮುಂದಾಗಿವೆ. ಈ ವೇಳೆ ಎದುರು ಬರುತ್ತಿದ್ದ ಕಾರಿಗೆ ಎತ್ತಿನಗಾಡಿ ಡಿಕ್ಕಿ ಹೊಡೆದಿದೆ.

ನಯಾನಗರದ ಮಲಪ್ರಭಾ ನದಿಯ ಮೇಲ್ಸೆತುವೆ ಮೇಲೆ ಈ ಘಟನೆ ನಡೆದಿದೆ. ಕಾರು ಚಾಲಕ ಘಟನೆಯಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ‌. ವಿಶೇಷ ಅಂದ್ರೆ ಎತ್ತಿನ ಗಾಡಿ ಡಿಕ್ಕಿ ಹೊಡೆದಿರುವ ದೃಶ್ಯವನ್ನು ಕಾರಿನಲ್ಲಿದ್ದವರೇ ಸೆರೆ ಹಿಡಿದಿದ್ದಾರೆ. ಘಟನೆಯಲ್ಲಿ ಕಾರಿನ ಗಾಜು ನುಜ್ಜಾಗಿದೆ.

ABOUT THE AUTHOR

...view details